ಅಧಿವೇಶನ 1
ಚೆಕ್-ಇನ್
(1 min)
ಭಾಗವಹಿಸುವವರು ಮತ್ತು ಸುಗಮಹೊಳಿಸುವವರೆಲ್ಲರೂ ಚೆಕ್-ಇನ್ ಮಾಡಲಿ.
Or six.zume.training/checkin and use code: 5678
ಪ್ರಾರ್ಥನೆ
(5 min)
ಪ್ರಾರ್ಥನೆಯಿಂದ ಪ್ರಾರಂಭಿಸಿ. ಪವಿತ್ರಾತ್ಮನಿಲ್ಲದೆ ಆತ್ಮೀಕ ಒಳನೋಟ ಮತ್ತು ಪರಿವರ್ತನೆ ಸಾಧ್ಯವಿಲ್ಲ. ಈ ಅಧಿವೇಶನದಲ್ಲಿ ನಿಮಗೆ ಮಾರ್ಗದರ್ಶನ ಕೊಡಲು ಆತನನ್ನು ಆಹ್ವಾನಿಸಲು ಗುಂಪಾಗಿ ಸಮಯ ತೆಗೆದುಕೊಳ್ಳಿ.
ಹೊರ ನೋಟ
(1 min)
ಈ ಅಧಿವೇಶನದಲ್ಲಿ, ನಾವು ಈ ಪರಿಕಲ್ಪನೆಗಳನ್ನು ಕೇಳಿಸಿಕೊಂಡು ಚರ್ಚಿಸುತ್ತೇವೆ:
ಮತ್ತು ನಾವು ಈ ಸಾಧನಗಳನ್ನು ನಮ್ಮ ಸಾಧನಗಳ ಪಟ್ಟಿಗೆ ಸೇರಿಸುತ್ತೇವೆ:
- ದೇವರು ಸಾಮಾನ್ಯ ಜನರನ್ನು ಉಪಯೋಗಿಸುತ್ತಾನೆ
- ಶಿಷ್ಯ ಮತ್ತು ಸಭೆಯ ಸರಳ ವ್ಯಾಖ್ಯಾನ
- ಆತ್ಮೀಕ ಉಸಿರಾಟವು ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದಾಗಿದೆ
- ಎಸ್.ಓ.ಎ.ಪಿ.ಎಸ್ ಸತ್ಯವೇದ ಓದುವಿಕೆ
- ಲೆಕ್ಕ ಒಪ್ಪಿಸಬೇಕಾದ ಗುಂಪುಗಳು
READ
(5 min)
ದೇವರು ಸಾಮಾನ್ಯ ಜನರನ್ನು ಉಪಯೋಗಿಸುತ್ತಾನೆ
ಜೂಮೆ ತರಬೇತಿಗೆ ಸುಸ್ವಾಗತ. ಜೂಮೆ ಎಂಬುದು "ಯೀಸ್ಟ್" ಎಂಬ ಗ್ರೀಕ್ ಪದವಾಗಿದೆ.
ದೇವರ ರಾಜ್ಯವು ಒಂದು ಸಣ್ಣ ಪ್ರಮಾಣದ ಜೂಮೆಯನ್ನು ತೆಗೆದುಕೊಂಡು ಹೆಚ್ಚಿನ ಪ್ರಮಾಣದ ಹಿಟ್ಟನ್ನು ಹಾಕಿದಸ್ತ್ರೀಹಾಗಿದೆಎಂದು ಯೇಸು ಹೇಳುತ್ತಾರೆ.
ಆಕೆ ಯೀಸ್ಟ್ಅನ್ನು ಮಿಶ್ರಣ ಮಾಡುತ್ತಿದ್ದಾಗ, ಹಿಟ್ಟನ್ನು ಹುಳಿಯಾಗುವವರೆಗೂ ಅದು ಹರಡುತ್ತದೆ.
ಸಾಮಾನ್ಯ ವ್ಯಕ್ತಿಯು ಬಹಳ ಚಿಕ್ಕದನ್ನು ತೆಗೆದುಕೊಂಡು ಅದನ್ನು ತುಂಬಾ ದೊಡ್ಡದಾದ ಪರಿಣಾಮವನ್ನು ಬೀರಲು ಬಳಸಬಹುದೆಂದು ಯೇಸು ನಮಗೆ ತೋರಿಸುತ್ತಿದ್ದಾರೆ!
ನಮ್ಮ ಕನಸು ಯೇಸು ಹೇಳಿದಂತೆ ಮಾಡುವುದಾಗಿದೆ - ದೇವರ ರಾಜ್ಯದಲ್ಲಿ ದೊಡ್ಡ ಪ್ರಭಾವ ಬೀರಲು ಪ್ರಪಂಚದಾದ್ಯಂತದ ಸಾಮಾನ್ಯ ಜನರಿಗೆ ಸಣ್ಣ ಸಾಧನಗಳನ್ನು ಬಳಸಲು ಸಹಾಯ ಮಾಡುವಂತದ್ದಾಗಿದೆ.
ಯೇಸುವನ್ನುಅನುಸರಿಸುವವರಿಗೆ ಸೂಚನೆಗಳು ಸರಳವಾಗಿದ್ದವು. ಆತನುಹೇಳುತ್ತಾನೆ--ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವುನನ ಗೆಕೊಡಲ್ಪಟ್ಟಿದೆ. ಆದ್ದರಿಂದ-- ನೀವುಹೊರ ಟುಹೋಗಿ ಎಲ್ಲಾದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆತಂದೆಯ, ಮಗನ, ಪವಿತ್ರಾತ್ಮ ನಹೆಸರಿನಲ್ಲಿ ದೀಕ್ಷಾಸ್ನಾ ನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆ ಲ್ಲಾಕಾ ಪಾಡಿ ಕೊಳ್ಳು ವದಕ್ಕೆ ಅವರಿಗೆಉಪದೇಶ ಮಾಡಿರಿ. ನೋಡಿರಿ ನಾನು ಯುಗದಸಮಾಪ್ತಿಯ ವರೆಗೂ ಎಲ್ಲಾದಿವಸ ನಿಮ್ಮ ಸಂಗಡ ಇರುತ್ತೇನೆ ಎಂದುಹೇಳಿದನು.
ಯೇಸುವಿನ ಆಜ್ಞೆಯು ಸರಳವಾಗಿತ್ತು - ಶಿಷ್ಯರನ್ನಾಗಿ ಮಾಡಿರಿಎಂದು
ಅದನ್ನು ಹೇಗೆ ಮಾಡಬೇಕೆಂಬುದರ ಕುರಿತು ಆತನ ಸೂಚನೆಗಳು ಸರಳವಾಗಿದ್ದವು -- ನೀವುಹೋಗುವಲೆಲ್ಲಾಶಿಷ್ಯರನ್ನಾಗಿ ಮಾಡಿರಿ
- ತಂದೆಯ, ಮಗನ, ಪವಿತ್ರಾತ್ಮನಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸುವು ದರಮೂಲ ಕಶಿಷ್ಯರನ್ನಾಗಿ ಮಾಡಿರಿ.
- ನಾನು ಆಜ್ಞಾಪಿಸಿದ್ದನ್ನೆ ಲ್ಲಾಕಾಪಾಡಿ ಕೊಳ್ಳುವಂತೆಕಲಿ ಸುವದರ ಮೂಲಕಶಿಷ್ಯರನ್ನಾಗಿ ಮಾಡಿರಿ.
ಹಾಗಾದರೆ ಶಿಷ್ಯರನ್ನಾಗಿ ಮಾಡುವ ಹಂತಗಳು ಯಾವುವು?
- ನಾವು ಎಲ್ಲ ಸಮಯದಲ್ಲೂ ಶಿಷ್ಯರನ್ನಾಗಿ ಮಾಡುತ್ತೇವೆ - ನಾವು ಹೊರಟುಹೋಗುವಾಗುಹೋದಎಲ್ಲೆಡೆ
- ಯಾರಾದರೂ ಯೇಸುವನ್ನು ಅನುಸರಿಸಲು ನಿರ್ಧರಿಸಿದಾಗ - ಅವರು ದೀಕ್ಷಾಸ್ನಾನ ಪಡೆಯಬೇಕು
- ಅವರು ಬೆಳೆದಂತೆ - ಯೇಸು ಆಜ್ಞಾಪಿಸಿದ ಎಲ್ಲವನ್ನೂ ಹೇಗೆ ಪಾಲಿಸಬೇಕೆಂದು ನಾವು ಪ್ರತಿಯೊಬ್ಬ ಶಿಷ್ಯರಿಗೂ ಕಲಿಸಬೇಕು.
ಆತನು ಆಜ್ಞಾಪಿಸಿದ ಒಂದು ವಿಷಯವೆಂದರೆ ಶಿಷ್ಯರನ್ನು ಮಾಡುವುದು, ಅಂದರೆ ಯೇಸುವನ್ನು ಅನುಸರಿಸುವ ಪ್ರತಿಯೊಬ್ಬ ಶಿಷ್ಯಹೇಗೆಶಿಷ್ಯರನ್ನಾಗಿಮಾಡಬೇಕೆಂದು ಕಲಿಯಬೇಕು.
ಆ ಶಿಷ್ಯರು ಶಿಷ್ಯರನ್ನಾಗಿ ಮಾಡಬೇಕಾಗಿದೆ. ನಂತರ ಆ ಶಿಷ್ಯರು ಸಹ ಶಿಷ್ಯರನ್ನಾಗಿ ಮಾಡಬೇಕಾಗಿದೆ.
ಶಿಷ್ಯರನ್ನು ಗುಣಿಸುವುದು. ಜೂಮೆಹೇಗೆಯೇ ಕಾರ್ಯಮಾಡುತ್ತದೆ.
ಇದು ಯೀಸ್ಟ್‌ನಂತಿದೆ - ಎಲ್ಲಾ ಹಿಟ್ಟನ್ನು ಹುಳಿಯಾಗುವವರೆಗೆ ಹಿಟ್ಟಿನ ಮೂಲಕ ಕೆಲಸ ಮಾಡಿದಂತೆ.
ಶಿಷ್ಯರನ್ನಾಗಿ ಮಾಡಲು ಯೇಸು ಈ ಆಜ್ಞೆಯನ್ನು ಕೊಟ್ಟಾಗ, ಆತನು ಒಂದು ವಾಗ್ದಾನವನ್ನುಕೂಡ ಕೊಟ್ಟನು.
ಯೇಸು ಹೇಳಿದರು - ನಾನು ಯುಗದ ಸಮಾಪ್ತಿ ಯವರೆಗೂ ಎಲ್ಲಾದಿವಸ ನಿಮ್ಮಸಂಗಡ ಇರುತ್ತೇನೆಎಂದು.
ಯೇಸುವನ್ನುಅನುಸರಿಸುವ ಪ್ರತಿಯೊಬ್ಬರು ಯೇಸು ಯಾವಾಗಲೂ ನಮ್ಮೊಂದಿಗಿದ್ದಾರೆ ಎಂಬ ವಾಗ್ದಾನವನ್ನು ನಂಬಬೇಕು. ಯಾಕೆಂದರೆಆತನುಹಾಗಿದ್ದಾನೆ!
ಆದರೆ ಇದರರ್ಥ ಯೇಸುವನ್ನುಅನುಸರಿಸುವ ಪ್ರತಿಯೊಬ್ಬರು ಶಿಷ್ಯರನ್ನಾಗಿ ಮಾಡಬೇಕೆಂ ಬವಾಸ್ತವಕ್ಕೆ ಬದ್ಧರಾಗಿರಬೇಕೆಂದು ಯೇಸು ಬಯಸುತ್ತಾರೆ. ಯಾಕೆಂದರೆ ಆತನುನಿ ಜವಾಗುಲೂಹಾಗೆ ಬಯಸುತ್ತಾನೆ.
ಯೇಸುಹೇಳುತ್ತಾರೆ - ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದ್ದರಿಂದ-- ನೀವುಹೊರಟು ಹೋಗಿ ಶಿಷ್ಯರನ್ನಾಗಿ ಮಾಡಿರಿ.
ಯೇಸುತಾನುಅವಲಂಬಿಸಿರುವಅದೇಅಧಿಕಾರವನ್ನೇ ನಮ್ಮನ್ನು ಕಳುಹಿಸುವಾಗಕೂಡಕೊಡವವನಾಗಿದ್ದಾನೆ.
ಅದಕ್ಕಿಂತ ಹೆಚ್ಚಿನ ಅಧಿಕಾರವಿಲ್ಲ ಎಂದು ಯೇಸು ಹೇಳುತ್ತಾರೆ. ಯಾವುದೇ ಸಂಪ್ರದಾಯಕ್ಕೂಅಷ್ಟು ಅಧಿಕಾರವಿಲ್ಲ.
ಯಾವುದೇ ಸಂಸ್ಕೃತಿಗೂಅಷ್ಟಿ ಅಧಿಕಾರವಿಲ್ಲ. ಭೂಮಿಯ ಮೇಲಿನ ಯಾವುದೇ ಕಾನೂನಿಗೂಅಷ್ಟು ಅಧಿಕಾರವಿಲ್ಲ.
ಹೋಗಿ ಶಿಷ್ಯರನ್ನಾಗಿ ಮಾಡಿಎಂದುಯೇಸುಹೇಳಿದ್ದಾರೆ.
ಈ ಜೂಮೆ - ಯೀಸ್ಟ್‌ನಂತೆ - ಎಲ್ಲಾ ಕೆಲಸಗಳು ಮುಗಿಯುವವರೆಗೂ ನಾವು ಹೋಗುವವರಾಗಿದ್ದೇವೆ ಮತ್ತು ಬೆಳೆಯುತ್ತೇವೆ.
ಚರ್ಚಿಸಿ
(10 min)
- ಯೇಸು ತನ್ನ ಹಿಂಬಾಲಕರಲ್ಲಿ ಪ್ರತಿಯೊಬ್ಬರೂ ತನ್ನ ಮಹಾ ಆಜ್ಞೆಗೆ ವಿಧೇಯರಾಗಲು ಉದ್ದೇಶಿಸಿದ್ದರೆ, ನಿಜವಾಗಿ ಕೆಲವರು ಶಿಷ್ಯರನ್ನು ಯಾಕೆ ಮಾಡುತ್ತಾರೆ?
READ
(5 min)
ಶಿಷ್ಯರು ಮತ್ತು ಸಭೆ
ಜುಮೆ ತರಬೇತಿಗೆ ಮತ್ತೊಮ್ಮೆ ಸ್ವಾಗತ. ಈ ಅಧಿವೇಶನದಲ್ಲಿ, ಶಿಷ್ಯರು ಮತ್ತು ಸಭೆಯ ಕುರಿತುಕಲಿಯೋಣ.
ಶಿಷ್ಯ ಎಂದರೇನು? ಮತ್ತು ಒಬ್ಬ ಶಿಷ್ಯನನ್ನು ಮಾಡುವುದು ಹೇಗೆ?
ಯೇಸುವನ್ನು ಅನುಸರಿಸುವವರಿಗೆ ಆತನ ಎಲ್ಲಾ ಆಜ್ಞೆಗಳನ್ನು ಪಾಲಿಸುವಂತೆ ನೀವು ಹೇಗೆ ಕಲಿಸುತ್ತೀರಿ? ಲೋಕಕ್ಕೆ ಸೆರೆಯಾಳುಗಳಾಗಿ ಜೀವಿಸಿದವರನ್ನು ತೆಗೆದುಕೊಂಡು ದೇವರ ರಾಜ್ಯದ ಪ್ರಜೆಯಾಗಲು ಅವರನ್ನು ಹೇಗೆ ಸಜ್ಜುಗೊಳಿಸುತ್ತೀರಿ?
ಶಿಷ್ಯ ಎಂಬ ಪದದ ಅರ್ಥವು ಅನುಸರಿಸುವವನು. ಆದ್ದರಿಂದ ಶಿಷ್ಯನು ದೇವರನ್ನು ಅನುಸರಿಸುವವನು. ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ ಎಂದು ಯೇಸು ಹೇಳಿದ್ದಾರೆ. ಆದ್ದರಿಂದ ದೇವರ ರಾಜ್ಯದಲ್ಲಿ, ಯೇಸು ನಮ್ಮ ರಾಜ. ನಾವು ಆತನ ಪ್ರಜೆಗಳು, ಆತನ ಚಿತ್ತಕ್ಕೆ ನಾವು ಬದ್ಧರಾಗಿದ್ದೇವೆ. ಆತನ ಆಸೆಗಳು, ಉದ್ದೇಶಗಳು, ಬಯಕೆಗಳು, ಆದ್ಯತೆಗಳು ಮತ್ತು ಮೌಲ್ಯಗಳು ಅತ್ಯುನ್ನತ ಮತ್ತು ಉತ್ತಮವಾಗಿವೆ. ಆತನ ವಾಕ್ಯವೇ ಕಾನೂನಾಗಿದೆ. ಹಾಗಾದರೆ ರಾಜ್ಯದ ಕಾನೂನು ಯಾವುದಾಗಿದೆ? ಯೇಸು ತನ್ನ ಪ್ರಜೆಗಳಿಗೆ ಏನು ಮಾಡಲು ಹೇಳುತ್ತಾರೆ?
ಯೇಸು ಹೇಳಿದ್ದಾರೆ - ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು ಎಂದು. ಯೇಸು ಹೇಳಿದ್ದಾರೆ - ನಿನ್ನ ನೆರೆಯವನನ್ನು ನಿನ್ನಂತೆ ಪ್ರೀತಿಸು ಎಂದು. ಹಳೆಯ ಒಡಂಬಡಿಕೆಯಿಂದ ದೇವರ ನ್ಯಾಯಪ್ರಮಾಣ ಮತ್ತು ಎಲ್ಲಾ ಪ್ರವಾದನೆಗಳು - ದೇವರನ್ನು ಪ್ರೀತಿಸಿ ಮತ್ತು ಜನರನ್ನು ಪ್ರೀತಿಸಿ ಎಂಬ ಈ ಎರಡು ವಿಷಯಗಳಲ್ಲಿಸಂಕ್ಷಿಪ್ತಗೊಳಿಸಬಹುದೆಂದು ಯೇಸು ಹೇಳಿದ್ದಾರೆ. ಶಿಷ್ಯರನ್ನಾಗಿ ಮಾಡಿರಿ ಎಂದು ಯೇಸು ಹೇಳಿದ್ದಾರೆ. ಯೇಸು ಹೇಳಿದನು - ನಾನು ಆಜ್ಞಾಪಿಸಿದ್ದನ್ನೆಲ್ಲಾ ಪಾಲಿಸಬೇಕೆಂದು ಅವರಿಗೆ ಕಲಿಸಿರಿ ಎಂದು.
ಶಿಷ್ಯರನ್ನಾಗಿ ಮಾಡುವುದು ಯೇಸು ಆಜ್ಞಾಪಿಸಿದ ಎಲ್ಲವನ್ನು ಅವರಿಗೆ ಕಲಿಸುವುದನ್ನು ಒಳಗೊಂಡಿರುವುದರಿಂದ - ಹೊಸ ಒಡಂಬಡಿಕೆಯನ್ನು ಶಿಷ್ಯರನ್ನಾಗಿ ಮಾಡಿರಿಎಂಬ ಈ ಒಂದು ವಿಷಯದಲ್ಲಿ ಸಂಕ್ಷಿಪ್ತಗೊಳಿಸಬಹುದು.
ಯೇಸುವನ್ನು ಅನುಸರಿಸುವ ಒಬ್ಬ ಶಿಷ್ಯನು ದೇವರನ್ನು ಪ್ರೀತಿಸುವವನು, ಜನರನ್ನು ಪ್ರೀತಿಸುವವನು ಮತ್ತು ಶಿಷ್ಯರನ್ನಾಗಿ ಮಾಡುವವನು ಆಗಿದ್ದಾನೆ.
ಹಾಗಾದರೆ ಸಭೆ ಎಂದರೇನು?
ಸಭೆಯನ್ನುನೀವು ಹೋಗುವ ಸ್ಥಳವಾಗಿರುವ ಕಟ್ಟಡವೆಂದು ಯೋಚಿಸಲು ನೀವು ರೂಡಿಮಾಡಿಕೊಂಡಿರಬಹುದು. ಆದರೆ ದೇವರ ವಾಕ್ಯಸಭೆಯ ಕುರಿತು ದೇವರಿಗೆ ಸಂಬಂಧಪಟ್ಟ ಜನರು ಒಂದು ಸಭೆಕೂಡುವುದರ ಬಗ್ಗೆ ಮಾತನಾಡುತ್ತದೆ.
"ಸಭೆ" ಎಂಬ ಪದವನ್ನು ಸತ್ಯವೇದದಲ್ಲಿ ಮೂರು ವಿಭಿನ್ನ ವಿಧಾನಗಳಲ್ಲಿ ಬಳಸಲಾಗುತ್ತದೆ:
- ಸಾರ್ವತ್ರಿಕ ಸಭೆ - ಎಲ್ಲ ಜನರು, ಎಂದೆಂದಿಗೂ ಯೇಸುವಿನ ಅನುಯಾಯಿಗಳಾಗಿರುತ್ತಾರೆ
- ನಗರ ಅಥವಾ ಪ್ರಾದೇಶಿಕ ಸಭೆ - ಯೇಸುವನ್ನು ಅನುಸರಿಸಿ ಎಲ್ಲಾ ಜನರು ವಿಶ್ವದ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅಥವಾ ಸುತ್ತಮುತ್ತಲೂ ವಾಸಿಸುವವರಾಗಿರುತ್ತಾರೆ
- ಮನೆಯಲ್ಲಿರುವ ಸಭೆ - ಯೇಸುವನ್ನು ಅನುಸರಿಸುವವರಲ್ಲಿ ಒಬ್ಬರು ಅಥವಾ ಹೆಚ್ಚಿನವರು ವಾಸಿಸುವ ಸ್ಥಳವನ್ನು ಭೇಟಿ ಮಾಡುವ ಜನರಾಗಿತ್ತಾರೆ.
ಒಂದು ಆತ್ಮಿಕ ಕುಟುಂಬ - ದೇವರನ್ನು ಪ್ರೀತಿಸುವವರು, ಜನರನ್ನು ಪ್ರೀತಿಸುತ್ತಾರೆ ಮತ್ತು ಶಿಷ್ಯರನ್ನಾಗಿ ಮಾಡುತ್ತಾರೆ. ಸ್ಥಳೀಯವಾಗಿ ಒಟ್ಟಿಗೆ ಭೇಟಿಯಾಗುವ ಇವರು ಈ ಕೊನೆಯ ರೀತಿಯ ಸಭೆಯಾಗುತ್ತಾರೆ - ಇದೇ ಮನೆಯಲ್ಲಿನಸಭೆ ಅಥವಾ ಸರಳ ಸಭೆಯಾರುತ್ತದೆ.
ಈ ಸರಳ ಸಭೆಗಳ ಗುಂಪುಗಳು ದೊಡ್ಡ ಕಾರ್ಯವನ್ನು ಮಾಡಲು ಒಂದುಗೂಡಿದಾಗ, ಅವರು ಪಟ್ಟಣದ ಅಥವಾ ಪ್ರಾದೇಶಿಕ ಸಭೆಯಾಗಿ ರಚಿಸಲ್ಪಡುತ್ತಾರೆ.
ಆ ಸರಳ ಸಭೆಗಳೆಲ್ಲವೂ ಪ್ರದೇಶಗಳಾಗಿ ಜಾಲತಾಣವಾಗಿ ಮಾಡಲ್ಪಟ್ಟುಇತಿಹಾಸದುದ್ದಕ್ಕೂ ವಿಸ್ತರಿಸಲ್ಪಟ್ಟ ಸಾರ್ವತ್ರಿಕ ಸಭೆಯಾಗಿ ರೂಪಿಸಲ್ಪಡುತ್ತವೆ.
ಕ್ಯಾಪಿಟಲ್ "ಸಿ" ಯೊಂದಿಗಿನ ಸಭೆ
ಸರಳ ಸಭೆಗಳು ಯೇಸುವಿನೊಂದಿಗೆ ಆತ್ಮಿಕ ಕುಟುಂಬಗಳಾಗಿವೆ ಯಾಕೆಂದರೆ ಯೇಸುವೇ ಅವರ ಕೇಂದ್ರ ಮತ್ತು ಅವರ ರಾಜ ಆಗಿರುತ್ತಾನೆ. ಸರಳ ಸಭೆಗಳು ದೇವರನ್ನು ಪ್ರೀತಿಸುವಂತ, ಇತರರನ್ನು ಪ್ರೀತಿಸುವಂತಹ ಮತ್ತು ಶಿಷ್ಯರ ಸಂಖ್ಯೆ ಹೆಚ್ಚಿಸುವಂತಹಶಿಷ್ಯರನ್ನಾಗಿ ಮಾಡುವ ಆತ್ಮಿಕ ಕುಟುಂಬಗಳಾಗಿವೆ. ಕೆಲವು ಸಭೆಗಳಿಗೆ ಕಟ್ಟಡಗಳು, ಕಾರ್ಯಕ್ರಮಗಳು ಮತ್ತು ಬಜೆಟ್ಗಳಿವೆ. ಆದರೆ ದೇವರನ್ನು ಪ್ರೀತಿಸುವಂತ, ಇತರರನ್ನು ಪ್ರೀತಿಸುವಂತಹ ಮತ್ತು ಶಿಷ್ಯರ ಸಂಖ್ಯೆ ಹೆಚ್ಚಿಸುವಂತಹ ಶಿಷ್ಯರನ್ನಾಗಿ ಮಾಡುವಸರಳ ಸಭೆಗಳಿಗೆ ಇವುಗಳಲ್ಲಿ ಯಾವುದೂ ಅಗತ್ಯವಿರಲ್ಲ. ಸಭೆಯನ್ನು ಹೆಚ್ಚು ಸಂಕೀರ್ಣ ಮತ್ತು ಗುಣಿಸಲು ಕಷ್ಟವಾಗುವಂತೆಹೆಚ್ಚುವರಿ ಒಂದುವೇಳೆ ಯಾವುದೇ ಮಾಡುವುದಾದರೆ, ನಮ್ಮ ತರಬೇತಿಯು ಕಟ್ಟಡಗಳು, ಕಾರ್ಯಕ್ರಮಗಳು ಮತ್ತು ಬಜೆಟ್ಗಳು ಎನ್ನುವಂತಹ ವಿಷಯಗಳನ್ನು ಗುಣಿಸುವಂತಹ ಸರಳ ಸಭೆಗಳಿಂದ ನಿರ್ಮಿಸಲಾದಪಟ್ಟಣದ ಅಥವಾ ಪ್ರಾದೇಶಿಕ ಸಭೆಗಳಿಗೆ ಬಿಟ್ಟುಕೊಡವಂತದ್ದಾಗಿದೆ.
ನೆನಪಿಡಿ "ಜುಮೆ" ಅಂದರೆ "ಯೀಸ್ಟ್" - ತ್ವರಿತವಾಗಿ ಉತ್ಪತ್ತಿ ಮಾಡುವ ಸರಳ, ಏಕ ಜೀವಕೋಶ ಜೀವಿಯಾಗಿದೆ.
ಜುಮೆ ತರಬೇತಿಯೊಂದಿಗೆ - ನಾವು ಆ ಯೀಸ್ಟ್‌ನಂತೆ - ಸರಳ ಹಾಗು ಗುಣಿಸುವವರಾಗಿರುತ್ತೇವೆ. ಆದರೆ ನಾವು ಗುಣಿಸಲು ಪ್ರಾರಂಭಿಸುವ ಮೊದಲು - ನಾವು ಉತ್ಪತ್ತಿಸುವವರಾಗಿರುವುದು ದೇವರು ಬಯಸುತ್ತಾರೆಂದು ನಾವು ತಿಳಿದಿರಬೇಕು. ಏಕೆಂದರೆ ಗುಣಿಸುವುದು ಒಳ್ಳೆಯದು - ಆದರೆ ಯಾವಾಗಲೂ ಅಲ್ಲ. ಕ್ಯಾನ್ಸರ್ ಗುಣಿಸುವಂತದ್ದಾಗಿದೆ. ಆದರೆ ಮಾರಕವಾಗಿದೆ. ಹಾಗಾದರೆ ಮರಣವನ್ನಲ್ಲದೇ ನಾವು ಜೀವನವನ್ನು ಹೇಗೆ ಪುನರುತ್ಪಾದಿಸುತ್ತೇವೆ? ನಾವು ಉತ್ಪತ್ತಿ ಮಾಡಲು ಯೋಗ್ಯವಾದ ಶಿಷ್ಯರು ಎಂದು ಹೇಗೆ ಖಚಿತಪಡಿಸಿಕೊಳ್ಳುತ್ತೇವೆ?
ಚರ್ಚಿಸಿ
(10 min)
- ನೀವು ಸಭೆಯ ಬಗ್ಗೆ ಆಲೋಚಿಸುವಾಗ, ನಿಮ್ಮ ಮನಸ್ಸಿಗೆ ಬರುವ ಸಂಗತಿ ಯಾವುದು?
- ಆ ಚಿತ್ರ ಮತ್ತು ವೀಡಿಯೊದಲ್ಲಿ "ಸರಳ ಸಭೆ" ಎಂದು ವಿವರಿಸಿರುವುದರ ನಡುವಿನ ವ್ಯತ್ಯಾಸವೇನು?
- ಹೆಚ್ಚು ಶಿಷ್ಯರನ್ನಾಗಿ ಮಾಡಲು ಯಾವುದು ಸುಲಭ ಎಂದು ನೀವು ಭಾವಿಸುತ್ತೀರಿ ಮತ್ತು ಯಾಕೆ?
READ
(5 min)
ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದು
ಜುಮೆ ತರಬೇತಿಗೆ ಮತ್ತೊಮ್ಮೆ ಸ್ವಾಗತ. ಈ ಅಧಿವೇಶನದಲ್ಲಿ, ನಾವು ದೇವರ ಸ್ವರ ಕೇಳುವ ಮತ್ತು ಕೇಳಿದ್ದನ್ನು ಪಾಲಿಸುವ ಕುರಿತು ಕಲಿಯೋಣ.
ಶ್ವಾಸವೇ ಜೀವನ. ನಾವು ಶ್ವಾಸ ತೆಗೆದುಕೊಳ್ಳುವತ್ತೇವೆ. ಶ್ವಾಸ ಬಿಡುತ್ತೇವೆ. ಜೀವನ.
ದೇವರ ರಾಜ್ಯದಲ್ಲಿ ಉಸಿರಾಟವೂ ಮುಖ್ಯವಾಗಿದೆ. ವಾಸ್ತದಲ್ಲಿ, ದೇವರು ತನ್ನ ಆತ್ಮವನ್ನು "ಶ್ವಾಸ" ಎಂದುಕರೆಯುತ್ತಾರೆ.
ರಾಜ್ಯದಲ್ಲಿ, ನಾವು ದೇವರ ಸ್ವರ ಕೇಳಿದಾಗ ನಾವು ಶ್ವಾಸ ತೆಗೆದುಕೊಳ್ಳುತ್ತೇವೆ. ನಾವು ಆತನ ವಾಕ್ಯವಾಗಿರುವ - ಸತ್ಯವೇದದ ಮೂಲಕ ದೇವರ ಸ್ವರ ಕೇಳಿದಾಗ ನಾವು ಶ್ವಾಸ ತೆಗೆದುಕೊಳ್ಳುತ್ತೇವೆ. ದೇವರೋಂದಿಗಿನ ನಮ್ಮ ಸಂಭಾಷಣೆಯಾಗಿರುವ ಪ್ರಾರ್ಥನೆಯ ಮೂಲಕ ದೇವರ ಸ್ವರ ಕೇಳಿದಾಗ ನಾವು ಶ್ವಾಸ ತೆಗೆದುಕೊಳ್ಳುತ್ತೇವೆ. ಯೇಸುವನ್ನು ಅನುಸರಿಸುವಆತನ ದೇಹವಾಗಿರುವ ಸಭೆಯ ಮೂಲಕದೇವರ ಸ್ವರ ಕೇಳಿದಾಗ ನಾವು ಶ್ವಾಸ ತೆಗೆದುಕೊಳ್ಳುತ್ತೇವೆ. ಆತನು ತನ್ನ ಮಕ್ಕಳು ಹಾದುಹೋಗುವಂತೆ ಅನುಮತಿಸುವಂತಹ ಘಟನೆಗಳು, ಅನುಭವಗಳು, ಕೆಲವೊಮ್ಮೆ ಹಿಂಸೆಗಳು ಮತ್ತು ಶ್ರಮೆಗಳು ಎಂಬ ಆತನ ಕಾರ್ಯಗಳ ಮೂಲಕ ದೇವರ ಸ್ವರ ಕೇಳಿದಾಗ ನಾವು ಶ್ವಾಸ ತೆಗೆದುಕೊಳ್ಳುತ್ತೇವೆ.
ದೇವರ ರಾಜ್ಯದಲ್ಲಿ ನಾವು ಕೇಳಿದ್ದನ್ನು ಕಾರ್ಯರೂಪದಲ್ಲಿಡುವಾಗ ಶ್ವಾಸ ಬಿಡುತ್ತೇವೆ. ನಾವು ವಿಧೆಯರಾಗುವಾಗ ಶ್ವಾಸ ಬಿಡುತ್ತೇವೆ.
ಕೆಲವೊಮ್ಮೆ ವಿಧೆಯರಾಗಲು ಶ್ವಾಸಬಿಡುವುದು ಎಂದರೆ ನಮ್ಮ ಆಲೋಚನೆಗಳು, ನಮ್ಮ ಮಾತುಗಳು ಅಥವಾ ನಮ್ಮ ಕಾರ್ಯಗಳನ್ನು ಯೇಸುವಿನ ಚಿತ್ತದೊಂದಿಗೆ ಹೊಂದಾಣಿಕೆಯಾಗಲು ಬದಲಾಯಿಸಿಕೊಳ್ಳುವಂತದ್ದಾಗಿದೆ.
ಕೆಲವೊಮ್ಮೆವಿಧೆಯರಾಗಲು ಶ್ವಾಸಬಿಡುವುದು ಎಂದರೆಯೇಸು ನಮ್ಮೊಂದಿಗೆ ಹಂಚಿಕೊಂಡಿದ್ದನ್ನು ಹಂಚಿಕೊಳ್ಳುವುದು -ಆತನು ನಮಗೆ ಕೊಟ್ಟದ್ದನ್ನು ಬಿಟ್ಟುಬಿಡುವುದಾಗಿದೆ-ಇದರ ನಿಮಿತ್ತ ದೇವರು ನಮ್ಮನ್ನು ಆಶೀರ್ವದಿಸುತ್ತಿರುವಂತೆಯೇ ಇತರರೂ ಆಶೀರ್ವದಿಸಲ್ಪಡುತ್ತಾರೆ.
ಯೇಸುವನ್ನುಅನುಸರಿಸುವವರಿಗೆ - ಈ ಶ್ವಾಸ ತೆಗೆದುಕೊಳ್ಳುವುದು ಮತ್ತು ಶ್ವಾಸಬಿಡುವುದು ಮುಖ್ಯವಾಗಿದೆ. ಇದು ನಮ್ಮ ಜೀವನವೇ ಆಗಿದೆ. ಯೇಸು ಹೇಳಿದ್ದಾರೆ - ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು ಆತನು ಮಾಡುವುದೆನ್ನೆಲ್ಲಾ ಹಾಗೆಯೇ ಮಗನೂ ಮಾಡುತ್ತಾನೆ.
ಯೇಸು ಹೇಳಿದ್ದಾರೆ -ನನ್ನಷ್ಟಕ್ಕೆ ನಾನೇ ಮಾತಾಡಿದವನಲ್ಲ; ನನ್ನನ್ನು ಕಳುಹಿಸಿಕೊಟ್ಟ ತಂದೆಯೇ - ನೀನುಇಂಥಿಂಥದನ್ನು ಹೇಳಬೇಕು, ಹೀಗೆ ಹೀಗೆ ಮಾತಾಡಬೇಕು ಎಂಬದಾಗಿ ನನಗೆಆಜ್ಞೆಕೊಟ್ಟಿದ್ದಾನೆ.
ಯೇಸು ತಾನು ಮಾತಾಡಿದ ಪ್ರತಿಯೊಂದು ಮಾತು ಮತ್ತು ಅವನು ಮಾಡಿರುವ ಪ್ರತಿಯೊಂದು ಕಾರ್ಯವೂ ದೇವರಿಂದ ಕೇಳಿದರು ಮತ್ತು ಆತನು ಕೇಳದ್ದಕ್ಕೆ ವಿಧೆಯರಾಗುವುದನ್ನು ಆಧರಿಸಿದೆ ಎಂದು ಹೇಳಿದ್ದಾರೆ. ಶ್ವಾಸ ತೆಗೆದುಕೊಳ್ಳುವುದು-ದೇವರ ಸ್ವರಕೇಳುವುದಾಗಿದೆ.
ಶ್ವಾಸ ಬಿಡುವುದು - ನೀವು ಕೇಳಿದ್ದನ್ನು ಪಾಲಿಸಿ ಅದನ್ನು ಇತರರೊಂದಿಗೆ ಹಂಚಿಕೊಳ್ಳಿವಂತದ್ದಾಗಿದೆ.
ಯೇಸು ತನ್ನನ್ನು ಅನುಸರಿಸುವವರು ದೇವರ ಶ್ವಾಸವಾಗಿರುವ ಮತ್ತು ಯೇಸುವಿನ ಶಿಷ್ಯರಾಗಿರುವ ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಶ್ವಾಸ ಊದಿರುವ ಪವಿತ್ರಾತ್ಮನಮೂಲಕವಾಗಿ ದೇವರ ಸ್ವರ ಕೇಳುವರು ಎಂದು ಯೇಸು ಹೇಳಿದ್ದಾರೆ.
ಯೇಸು ಹೇಳಿದ್ದಾರೆ - ತಂದೆಯು ನನ್ನ ಹೆಸರಿನಲ್ಲಿ ಕಳುಹಿಸುವ ಸಹಾಯಕ, ಪವಿತ್ರಾತ್ಮನು ನಿಮಗೆ ಎಲ್ಲವನ್ನು ಕಲಿಸುವನು ಮತ್ತು ನಾನು ನಿಮಗೆ ಹೇಳಿದ ಎಲ್ಲವನ್ನೂ ನಿಮಗೆ ಜ್ಞಾಪಕಗೊಳಿಸುವನು ಎಂದು.
ಶ್ವಾಸ ತೆಗೆದುಕೊಳ್ಳುವುದು - ದೇವರ ಸ್ವರ ಕೇಳವಂತದ್ದಾಗಿದೆ. ಶ್ವಾಸ ಬಿಡುವುದು - ನೀವು ಕೇಳಿದ್ದನ್ನು ಪಾಲಿಸಿ ಅದನ್ನು ಇತರರೊಂದಿಗೆ ಹಂಚಿಕೊಳ್ಳುವಂತದ್ದಾಗಿದೆ.
ಯೇಸು ಹೇಗೆ ಬದುಕಬೇಕೆಂದು ನಮಗೆ ತೋರಿಸುತ್ತಿದ್ದಾರೆ.
ಹಾಗಾದರೆ ನಾವು ದೇವರ ಸ್ವರವನ್ನು ಹೇಗೆ ಕೇಳಿಸಿಕೊಳ್ಳುತ್ತೇವೆ? ಯಾವುದು ಪಾಲಿಸಬೇಕೆಂದು ನಮಗೆ ಹೇಗೆ ಗೊತ್ತಾಗುತ್ತದೆ?
ಯೇಸು ತನ್ನನ್ನು "ಒಳ್ಳೆಯ ಕುರುಬ" ಎಂದು ಹೇಳಿಕೊಂಡರು. ಯೇಸು ತನ್ನನ್ನು ಅನುಸರಿಸುವವರಿಗೆ ತನ್ನ "ಕುರಿ" ಎಂದು ಕರೆದರು. ಯೇಸು ಹೇಳಿದ್ದಾರೆ - ನನ್ನ ಕುರಿಗಳು ನನ್ನ ಸ್ವರ ಕೇಳುತ್ತವೆ, ಮತ್ತು ನಾನು ಅವುಗಳನ್ನು ಬಲ್ಲೆನು ಮತ್ತು ಅವು ನನ್ನನ್ನು ಹಿಂಬಾಲಿಸುತ್ತವೆ ಎಂದು. ಯೇಸು ಹೇಳಿದ್ದಾರೆ - ದೇವರಿಗೆ ಸೇರಿದವನು ದೇವರು ಹೇಳುವದನ್ನು ಕೇಳುತ್ತಾನೆ. ನೀವು ಕೇಳದಿರಲು ಕಾರಣ ನೀವು ದೇವರಿಗೆ ಸೇರಿದವರಲ್ಲ ಎಂದು.
ಯೇಸುವನ್ನು ಅನುಸರಿಸುವವರಾಗಿ ನಾವು ಆತನ ಸ್ವರ ಕೇಳಲು ಬದ್ಧರಾಗಿರಬೇಕು.
- ನಾವು ಶಾಂತವಾಗಿರುವುದರಿಂದ ಆತನ ಸ್ವರ ಕೇಳುತ್ತೇವೆ.
- ನಾವು ಯೇಸುವಿನ ಮೇಲೆ ಕೇಂದ್ರೀಕರಿಸುವ ಮೂಲಕ ಆತನ ಸ್ವರ ಕೇಳುತ್ತೇವೆ.
- ನಮ್ಮ ಆಲೋಚನೆಗಳಲ್ಲಿ, ನಮ್ಮ ದರ್ಶನಗಳಲ್ಲಿ, ನಮ್ಮ ಭಾವನೆಗಳಲ್ಲಿ ಮತ್ತು ಅನಿಸಿಕೆಗಳಲ್ಲಿ ನಾವು ಆತನ ಸ್ವರ ಕೇಳುತ್ತೇವೆ.
- ನಾವು ಕೇಳಿದ್ದನ್ನು ಬರೆದು ಪರೀಕ್ಷಿಸಿದಾಗಆತನ ಸ್ವರ ಕೇಳುತ್ತೇವೆ.
ಎಲ್ಲಾ ಸ್ವರ, ಎಲ್ಲಾ ಆಲೋಚನೆ, ಎಲ್ಲಾದರ್ಶನ, ಭಾವನೆ ಅಥವಾ ಅನಿಸಿಕೆ ದೇವರ ಸ್ವರವಲ್ಲ. ಕೆಲವೊಮ್ಮೆ ಅದು ಸೈತಾನನ ಸ್ವರವೂ ಕೂಡ ಆಗಿರುತ್ತದೆ. ನಮ್ಮ ವೈರಿಯಾದ ಸೈತಾನನು ಸುಳ್ಳುಗಾರನು ಮತ್ತು ಸುಳ್ಳಿಗೆ ಮೂಲ ಪುರುಷನಾಗಿದ್ದಾನೆಂದು ಯೇಸು ಹೇಳಿದ್ದಾರೆ. ನಮ್ಮ ವೈರಿಯಾದ ಸೈತಾನನು ಕದ್ದುಕೊಳ್ಳಲು, ಕೊಲೆಮಾಡಲು ಮತ್ತು ನಾಶಮಾಡಲು ಬರುತ್ತಾನೆ ಎಂದು ಯೇಸು ಹೇಳಿದ್ದಾರೆ.
ಆದರೆ ನಾವು ದೇವರ ಸ್ವರ ಕೇಳುತ್ತೇವೆ ಮತ್ತು ಮಾತನಾಡುವಾಗ ಅದು ಆತನೇ ಎಂದು ನಮಗೆ ತಿಳಿದಿರುತ್ತದೆ ಎಂದು ದೇವರು ಹೇಳುತ್ತಾರೆ. ಅಭ್ಯಾಸ ಮತ್ತು ಪ್ರಾರ್ಥನೆಯೊಂದಿಗೆ, ನಾವು ದೇವರ ಸ್ವರವನ್ನು ಚೆನ್ನಾಗಿ ತಿಳಿದುಕೊಳ್ಳಬಹುದು. ನಾವು ಕೇಳುವುದು ದೇವರ ಸ್ವರವಾಗಿದೆಯಾ ಅಥವಾ ಇನ್ನೊಂದು ಸ್ವರವಾಗಿದೆಯಾ ಎಂದು ತಿಳಿಯಲು ನಾವು ಕಲಿಯಬಹುದು.
ನಾವು ಕೇಳುವದನ್ನು ಪರೀಕ್ಷಿಸಲು ಕೆಲವು ವಿಧಾನಗಳು ಇಲ್ಲಿವೆ:
- ಯೇಸು ಮಾತನಾಡುವಾಗ - ಆತನಸ್ವರವು ಸತ್ಯವೇದದ ಮೂಲಕ ಈಗಾಗಲೇ ನಮಗೆ ತಿಳಿಸಿರುವ ಆತನ ಲಿಖಿತ ವಾಕ್ಯದೊಂದಿಗೆ ಹೊಂದಿಕೆಯಾಗುತ್ತದೆ. ಆತನು ಮಾತನಾಡುವ ಸ್ವರಆತನ ಲಿಖಿತ ಸ್ವರಕ್ಕೆ ಎಂದಿಗೂ ವಿರೋಧಿಸುವುದಿಲ್ಲ.
- ಯೇಸು ಮಾತನಾಡುವಾಗ - ಆತನ ಸ್ವರವು ನಮ್ಮ ಹೃದಯಕ್ಕೆ ಭರವಸೆ ಮತ್ತು ಶಾಂತಿಯ ಭಾವವನ್ನು ನೀಡುತ್ತದೆ. ಆತನ ಸ್ವರವು ನಮ್ಮನ್ನು ಖಂಡಿಸುವುದಿಲ್ಲ ಅಥವಾ ನಿರುತ್ಸಾಹಗೊಳಿಸುವುದಿಲ್ಲ. ಯೇಸು ಖಂಡಿಸುವುದಿಲ್ಲ. ಯೇಸು ಪ್ರೀತಿಯಲ್ಲಿ ಸರಿಪಡಿಸುತ್ತಾರೆ.
- ಯೇಸುವಿನ ಸ್ವರವುಜಾರತ್ವ ಬಂಡುತನ ನಾಚಿಕೆಗೇಡಿತನ ವಿಗ್ರಹಾರಾಧನೆ ಮಾಟ ಹಗೆತನ ಜಗಳ ಹೊಟ್ಟೇಕಿಚ್ಚು ಸಿಟ್ಟುಕಕ್ಷಭೇದ ಭಿನ್ನಮತ ಮತ್ಸರ ಕುಡಿಕತನ ದುಂದೌತಣಇವುಗಳನ್ನು ವ್ಯಕ್ತಪಡಿಸುವುದಿಲ್ಲ. ಇವೆಲ್ಲವುಗಳು ದೇವರ ಸ್ವರವಲ್ಲ.
- ಯೇಸು ಮಾತನಾಡುವಾಗ - ಆತನ ಸ್ವರವು ದೇವರಾತ್ಮನ ಫಲವನ್ನು ವ್ಯಕ್ತಪಡಿಸುತ್ತದೆ -ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ.
- ಯೇಸು ಮಾತನಾಡುವಾಗ - ಆತನ ಸ್ವರವುನಮಗೆ ಅನುಮಾನದ ಬದಲು ಭರವಸೆ ನೀಡುತ್ತದೆ. ನಾವು ಕೇಳುತ್ತಿರುವುದು ದೇವರಿಂದ ಬಂದಿದೆ ಎಂಬ ಜ್ಞಾನ ಮತ್ತು ಶಾಂತಿಯನ್ನು ನಾವು ನಮ್ಮೊಳಗೆ ಅನುಭವಿಸುತ್ತೇವೆ. ನಾವು ಎಲ್ಲವನ್ನೂ ಒಂದೇ ಬಾರಿಗೆ ಕೇಳದೇ ಇರಬಹುದು. ನಾವು ಅಂತಿಮವಾಗಿ ತಿಳಿದುಕೊಳ್ಳಬೇಕಾದ ಒಂದು ಭಾಗವನ್ನು ಮಾತ್ರ ಕೇಳಬಹುದು. ಆದರೆ ನಾವು ಕೇಳುತ್ತಿರುವುದು ಗಟ್ಟಿಯಾಗಿರುತ್ತದೆ - ಬದಲಾಗುವುದಿಲ್ಲ ಅಥವಾ ಕದಲುವುದಿಲ್ಲ.
ಯೇಸುವನ್ನು ಅನುಸರಿಸುವವ ಪ್ರತಿಯೊಬ್ಬರಿಗೆ ಶುಭವಾರ್ತೆ ಏನೆಂದರೆ, ನಾವು ಶ್ವಾಸ ತೆಗೆದುಕೊಳ್ಳುವಾಗ ದೇವರ ಸ್ವರ ಕೇಳುತ್ತೇವೆ ಮತ್ತು ನಾವು ಶ್ವಾಸಬಿಡುವಾಗ ಕೇಳುವದನ್ನು ಪಾಲಿಸಿಇತರರೊಂದಿಗೆ ಹಂಚಿಕೊಳ್ಳುತ್ತೇವೆ -ಹೇಗೆ ಮಾಡಿದರೆ ದೇವರು ಇನ್ನಷ್ಟು ಸ್ಪಷ್ಟವಾಗಿ ನಮ್ಮೊಂದಿಗೆ ಮಾತನಾಡುವಂತದ್ದಾಗಿದೆ.
ಆತನ ಶ್ವಾಸ ಇನ್ನೂ ನಮ್ಮ ಮೂಲಕ ಉಸಿರಾಡುತ್ತದೆ.
ನಾವು ಆತನ ಸ್ವರವನ್ನು ಇನ್ನೂ ಸ್ಪಷ್ಟವಾಗಿ ಕೇಳುತ್ತೇವೆ. ನಾವು ಆತನ ಸ್ವರವನ್ನು ಮಾತ್ರತಿಳಿದುಕೊಳ್ಳುತ್ತೇವೇ ಹೊರತು ಬೇರಯವರದ್ದಲ್ಲ. ನಾವು ಲೋಕದಲ್ಲಿ ಆತನಕಾರ್ಯವನ್ನು ಕಂಡು ಆತನೊಂದಿಗೆ ಸೇರಿ ಆತನೊಂದಿಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಜೀವನವನ್ನು ನಾವು ಶ್ವಾಸತೆಗೆದುಕೊಳ್ಳುತ್ತೇವೆ. ಶ್ವಾಸ ಬಿಡುತ್ತೇವೆ.
ಚರ್ಚಿಸಿ
(10 min)
- ದೇವರ ಸ್ವರವನ್ನು ಕೇಳಿ ಗುರುತಿಸಲು ಕಲಿಯುವುದು ಯಾಕೆ ಅತ್ಯಗತ್ಯ?
- ಕರ್ತನಿಗೆ ಕಿವಿಗೊಡುವುದು ಮತ್ತು ಪ್ರತಿಕ್ರಿಯಿಸುವುದು ನಿಜವಾಗಿಯೂ ಉಸಿರಾಟದ ಹಾಗೆ ಇದೆಯಾ? ಯಾಕೆ ಅಥವಾ ಯಾಕೆ ಇಲ್ಲ?
READ
(5 min)
ಎಸ್.ಓ.ಎ.ಪಿ.ಎಸ್. ಸತ್ಯವೇದವನ್ನು ಓದುವುದು
ಯೇಸು ಹೇಳಿದ್ದಾರೆ - "ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ,ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೇಸರಿನಲ್ಲಿದೀಕ್ಷಾಸ್ನಾನ ಮಾಡಿಸಿ,ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ..."
ಯೇಸುವಿಗೆ ಅನುಸರಿಸುವ ಪ್ರತಿಯೊಬ್ಬರು ಯೇಸು ಆಜ್ಞಾಪಿಸಿದ್ದನ್ನೆಲ್ಲಾ ಪಾಲಿಸಬೇಕಾದರೆ, ಯೇಸು ಏನು ಆಜ್ಞಾಪಿಸಿದ್ದಾರೆಂದು ಅವರು ತಿಳಿದುಕೊಳ್ಳಬೇಕು.
ಶ್ರೇಷ್ಠ ಆಜ್ಞೆ ಮತ್ತು ಶ್ರೇಷ್ಠ ಆದೇಶವು ದೇವರು ನಮಗೆ ಏನು ಹೇಳುತ್ತಾರೋ ಅದರ ಒಂದು ಶ್ರೇಷ್ಠ ಸಾರಾಂಶವಾಗಿದೆ,ಆದರೆ ಅನುಯಾಯಿ ದೇವರು ಅವರನ್ನು ಸೃಷ್ಟಿಸಿದ ಪೂರ್ಣ ಉದ್ದೇಶಕ್ಕೆ ಬೆಳೆಯಲು ಬಯಸುವುದಾದರೆ.ಅವರು ಇನ್ನಷ್ಟು ತಿಳಿದುಕೊಳ್ಳಬೇಕು ಮತ್ತು ಪಾಲಿಸಬೇಕು.
SOAPS ಎಂದರೆ:
- ದೇವರ ವಾಕ್ಯ
- ವೀಕ್ಷಣೆ
- ಅನ್ವಯಿಸುವಿಕೆ
- ಪ್ರಾರ್ಥನೆ ಮತ್ತು
- ಹಂಚಿಕೊಳ್ಳುವು
ಯೇಸುವಿಗೆ ಅನುಸರಿಸುವ ಯಾರೇ ಆಗಲಿ ಇದನ್ನು ಬಳಸಿ ಪರಿಣಾಮಕಾರಿ ಸತ್ಯವೇದ ಅಧ್ಯಯನ ವಿಧಾನವನ್ನು ಕಲಿಯಲು ಮತ್ತು ನೆನಪಿಟ್ಟುಕೊಳ್ಳಲು ಇದು ಸರಳವಾದ ಮಾರ್ಗವಾಗಿದೆ.ಪ್ರತಿಯೊಂದು ವಿಭಾಗವನ್ನು ಸ್ವಲ್ಪ ಹೆಚ್ಚಾಗಿ ನೋಡಿಕೊಳ್ಳೋಣ.
ನೀವು ಬೈಬಲ್ ಓದಿದಾಗ ಅಥವಾ ಕೇಳಿದಾಗ:
- Scripture (ದೇವರ ವಾಕ್ಯ) : ನಿಮಗೆ ವಿಶೇಷವಾಗಿ ಅರ್ಥಪೂರ್ಣವಾದ ಒಂದು ಅಥವಾ ಹೆಚ್ಚಿನ ವಚನಗಳನ್ನು ಇಂದು ಬರೆಯಿರಿ.
- Observation (ವೀಕ್ಷಣೆ) : ದೇವರ ವಾಕ್ಯದಿಂದ ಆ ವಚನಗಳನ್ನು ಅಥವಾ ಪ್ರಮುಖ ಅಂಶಗಳನ್ನು ನಿಮ್ಮ ಸ್ವಂತ ಮಾತುಗಳಲ್ಲಿ ನಿಮಗೆ ಚೆನ್ನಾಗಿ ಅರ್ಥ ಆಗುವ ಹಾಗೆ ಬರೆಯಿರಿ.
- Application (ಅನ್ವಯಿಸುವಿಕೆ) : ನಿಮ್ಮ ಸ್ವಂತ ಜೀವನದಲ್ಲಿ ಈ ಆಜ್ಞೆಗಳನ್ನು ಅಥವಾ ಪರಿಕಲ್ಪನೆಗಳನ್ನು ಪಾಲಿಸುವುದು ಎಂದರೇನು ಎಂದು ಯೋಚಿಸಿ. ನೀವು ವಿಭಿನ್ನವಾಗಿ ಏನು ಮಾಡಬೇಕು? ಎಂದು ಅವುಗಳನ್ನು ಬರೆಯಿರಿ.
- Prayer (ಪ್ರಾರ್ಥನೆ) : ದೇವರನ್ನು ವಾಕ್ಯದಲ್ಲಿ ನೀವು ಏನು ಓದಿದ್ದೀರೋ ಮತ್ತು ಆತನ ಆಜ್ಞೆಗಳನ್ನು ಪಾಲಿಸುವ ಬಗ್ಗೆ ಮತ್ತು ನೀವು ಕಲಿತದ್ದನ್ನು ಕ್ರಿಯೆದಲ್ಲಿಡುವ ಬಗ್ಗೆ ಅರ್ಥಮಾಡಿಕೊಂಡು ನೀವು ದೇವರಿಗೆ ತಿಳಿಸುವಂತಹ ಪ್ರಾರ್ಥನೆಯನ್ನು ಬರೆಯಿರಿ.
- Sharing(ಹಂಚಿಕೋಳ್ಳುವುದು) : ನೀವು ಕಲಿತದ್ದನ್ನು ಯಾರೊಂದಿಗೆ ಹಂಚಿಕೊಳ್ಳಬೇಕೆಂದು ಮತ್ತು ಹೇಗೆ ಅನ್ವಯಿಸಿಕೊಳ್ಳಬೇಕೆಂದುದೇವರನ್ನು ಕೇಳಿ.
ಹಾಗಾಗಿ SOAPS ಹೇಗೆ ಕಾರ್ಯಮಾಡುತ್ತದೆ ನೋಡೋಣ:
- Scripture (ದೇವರ ವಾಕ್ಯ) : ಸತ್ಯವೇ ಹೇಳುತ್ತದೆ - "ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ, ಎಂದು ಯೆಹೋವ ಹೇಳುತ್ತಾನೆ. "ಯಾಕಂದರೆ ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ,ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ,ಅಷ್ಟು ಉನ್ನತವಾಗಿವೆ. "ಯೆಶಾಯ 55: 8-9.
- Observation (ವೀಕ್ಷಣೆ) : ಮನುಷ್ಯರಾಗಿ ನಮಗೆ ತಿಳಿದಿವದರಲ್ಲಿ ಮತ್ತು ಹೇಗೆ ಮಾಡಬೆಕೆಂಬ ತಿಳುವಳಿಕೆಯಲ್ಲಿ ನಾವು ಸೀಮಿತವಾಗಿದ್ದೇವೆ, ದೇವರು ಯಾವುದರಲ್ಲಿಯೂ ಸೀಮಿತವಾಗಿಲ್ಲ, ಆತನುಎಲ್ಲವನ್ನೂ ನೋಡುತ್ತಾನೆ ಮತ್ತು ತಿಳಿದಿದ್ದಾನೆ ಆವನು ಏನು ಬೇಕಾದರೂ ಮಾಡಬಹುದು.
- Application (ಅನ್ವಯಿಸುವಿಕೆ) : ದೇವರು ಎಲ್ಲವನ್ನೂ ತಿಳಿದಿರುವುದರಿಂದ ಮತ್ತು ಆತನ ಮಾರ್ಗಗಳು ಅತ್ಯುತ್ತಮವಾದ ಕಾರಣನಾವು ನಮ್ಮ ಇಷ್ಟದಂತೆ ಕಾರ್ಯಗಳನ್ನು ಮಾಡುವುದರ ಬದಲಿಗೆ ಆತನನ್ನು ಅನುಸರಿಸುವುದಾದರೆ ನಮ್ಮ ಜೀವನದಲ್ಲಿ ಹೆಚ್ಚು ಯಶಸ್ಸನ್ನು ಪಡೆಯುತ್ತೇವೆ.
- Prayer (ಪ್ರಾರ್ಥನೆ) : ಕರ್ತನೇ, ನಿಮ್ಮನ್ನು ಸಂತೋಷಪಡಿಸುವ ಮತ್ತು ಇತರರಿಗೆ ಸಹಾಯ ಮಾಡುವ ಉತ್ತಮ ಜೀವನವನ್ನು ಹೇಗೆ ನಡೆಸಬೇಕೆಂದು ನನಗೆ ಗೊತ್ತಿಲ್ಲ. ನನ್ನ ಮಾರ್ಗಗಳು ತಪ್ಪುಗಳಿಗೆ ಗುರಿಮಾಡುತ್ತವೆ. ನನ್ನ ಆಲೋಚನೆಗಳು ನೋವಿಗೆ ಗುರಿಮಾಡುತ್ತವೆ. ಅದರ ಬದಲಿಗೆ ದಯವಿಟ್ಟು ನಿಮ್ಮ ಮಾರ್ಗಗಳನ್ನು ಮತ್ತು ನಿಮ್ಮ ಆಲೋಚನೆಗಳನ್ನು ನನಗೆ ಕಲಿಸಿರಿನಾನು ನಿಮ್ಮನ್ನು ಅನುಸರಿಸುವಾಗ ನಿನ್ನ ಪವಿತ್ರಾತ್ಮನು ನಮಗೆ ಮಾರ್ಗದರ್ಶನ ನೀಡಲಿ.
- Sharing (ಹಂಚಿಕೋಳ್ಳುವುದು) : ನಾವು ಈ ವಾಕ್ಯಳನ್ನು ಮತ್ತು ಈ ಅನ್ವಯಿಸುವಿಕೆಯನ್ನು ಕಷ್ಟಕಾಲ ಎದುರಿಸುತ್ತಿರುವ ಹಾಗು ಪ್ರಮುಖ ನಿರ್ಧಾರಗಳಿಗೆ ಬೇಕಾದ ಮಾರ್ಗದರ್ಶನಕ್ಕಾಗಿ ನನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ
SOAPS ಸತ್ಯವೇದ ಅಧ್ಯಯನ ಜೂಮೇ ಸತ್ಯವೇದ ಅಧ್ಯಯನದಲ್ಲಿರುವ ಸರಳ ಸಾಧನಗಳಲ್ಲಿ ಒಂದಾಗಿದೆ.
ಚಟುವಟಿಕೆ
(30 min)
ಎಸ್.ಓ.ಎ.ಪಿ.ಎಸ್ ಸತ್ಯವೇದ ಅಧ್ಯಯನ
QR ಕೋಡ್ ಸ್ಕ್ಯಾನ್ ಮಾಡಿ.
ಮತ್ತಾಯ 6:9-13 ಉಪಯೋಗಿಸಿಕೊಂಡು ಎಸ್.ಓ.ಎಪಿ.ಎಸ್ ಸತ್ಯವೇದ ಅಧ್ಯಯನ ಮಾದರಿಯ ಮಾಡಿ ಮತ್ತು ಪ್ರತ್ಯೇಕವಾಗಿ ಕೆಲಸ ಮಾಡಿ. (20 ನಿಮಿಷ)
ಒಟ್ಟಿಗೆ ಹಿಂತಿರುಗಿ ಮತ್ತು ನಿಮ್ಮ ಎಸ್.ಓ.ಎ.ಪಿ.ಎಸ್. ಹಂಚಿಕೊಳ್ಳಿ. ಎರಡು ಅಥವಾ ಮೂರು ಗುಂಪುಗಳಲ್ಲಿ. (10 ನಿಮಿಷ)
ವಾಕ್ಯ
ಇಂದು ನಿಮಗೆ ವಿಶೇಷವಾಗಿ ಅರ್ಥಗರ್ಭಿತವಾಗಿರುವ ಒಂದು ಅಥವಾ ಹೆಚ್ಚು ವಚನಗಳನ್ನು ಬರೆಯಿರಿ.
ಅವಲೋಕನ
ಇನ್ನೂ ಉತ್ತಮವಾಗಿ ಅರ್ಥಮಾಡಿಕೊಳ್ಳಲು ಆ ವಚನಗಳನ್ನು ಅಥವಾ ಮುಖ್ಯ ಅಂಶಗಳನ್ನು ನಿಮ್ಮ ಸ್ವಂತ ಮಾತುಗಳಲ್ಲಿ ತಿರಿಗಿ ಬರೆಯಿರಿ.
ಅನ್ವಯ
ನಿಮ್ಮ ಸ್ವಂತ ಜೀವನದಲ್ಲಿ ಈ ಆಜ್ಞೆಗಳಿಗೆ ವಿಧೇಯರಾಗುವದು ಎಂದರೆ ಏನೆಂಬುದನ್ನು ಕುರಿತು ಆಲೋಚಿಸಿ.
ಪ್ರಾರ್ಥನೆ
ನೀವು ಏನನ್ನು ಕಲಿತಿದ್ದೀರಿ ಮತ್ತು ನೀವು ಹೇಗೆ ವಿಧೇಯರಾಗಲು ಯೋಜನೆ ಮಾಡುತ್ತಿರೆಂದು ದೇವರಿಗೆ ಹೇಳುವ ಪ್ರಾರ್ಥನೆಯನ್ನು ಬರೆಯಿರಿ.
ಹಂಚಿಕೊಳ್ಳುವದು
ನೀವು ಕಲಿತದ್ದನ್ನು/ಅನ್ವಯಿಸಿದ್ದನ್ನು ಯಾರೊಂದಿಗೆ ಹಂಚಿಕೊಳ್ಳಬೇಕೆಂದು ದೇವರು ಬಯಸುತ್ತಾನೆಂದು ಕೇಳಿಕೊಳ್ಳಿರಿ.
S.O.A.P.S. ಕಾರ್ಯಮಾಡುತ್ತಿರುವ ಒಂದು ಉದಾಹರಣೆ ಇಲ್ಲಿ ಕೊಡಲ್ಪಟ್ಟಿದೆ:
S - "ಯೆಹೋವನು ಹೀಗನ್ನುತ್ತಾನೆ - ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ." [ಯೆಶಾಯ 55:8-9]
O - ಮಾನವನಾದ ನಾನು, ನನಗೆ ತಿಳಿದಿರುವ ಮತ್ತು ಹೇಗೆ ಮಾಡಬೇಕೆಂದು ನನಗೆ ತಿಳಿದಿರುವ ಸಂಗತಿಗಳಲ್ಲಿ ನಾನು ಸೀಮಿತವಾಗಿದ್ದೇನೆ. ದೇವರು ಯಾವುದೇ ರೀತಿಯಲ್ಲಿ ಮಿತಿಯನ್ನು ಹೊಂದಿರುವದಿಲ್ಲ. ಆತನು ಎಲ್ಲವನ್ನು ನೋಡುವಾತನು ಮತ್ತು ತಿಳಿದಾತನು ಆಗಿದ್ದಾನೆ. ಆತನು ಏನು ಬೇಕಾದರೂ ಮಾಡಬಲ್ಲನು.
A - ದೇವರು ಎಲ್ಲವನ್ನು ತಿಳಿದಿರುವದರಿಂದ ಮತ್ತು ಆತನ ಮಾರ್ಗಗಳು ಒಳ್ಳೆಯದಾಗಿರುವದರಿಂದ, ನನ್ನ ಸ್ವಂತ ರೀತಿಯಲ್ಲಿ ಕಾರ್ಯಗಳನ್ನು ಮಾಡುವದಕ್ಕೆ ಬದಲಾಗಿ ನಾನು ಆತನನ್ನು ಹಿಂಬಾಲಿಸಿದರೆ ಜೀವನದಲ್ಲಿ ಹೆಚ್ಚು ಯಶಸ್ವಿಯಾಗುವೆನು.
P - ಕರ್ತನೇ, ನಿನ್ನನ್ನು ಮೆಚ್ಚಿಸುವ ಮತ್ತು ಇತರರಿಗೆ ಸಹಾಯ ಮಾಡುವಂತ ಒಳ್ಳೇ ಜೀವಿತವನ್ನು ಹೇಗೆ ನಡೆಸಬೇಕೆಂದು ನನಗೆ ತಿಳಿದಿಲ್ಲ. ನನ್ನ ಮಾರ್ಗಗಳು ತಪ್ಪುಗಳಿಗೆ ನಡೆಸುತ್ತವೆ. ನನ್ನ ಆಲೋಚನೆಗಳು ನೋವಿಗೆ ನಡೆಸುತ್ತವೆ. ದಯವಿಟ್ಟು ನನಗೆ ನಿನ್ನ ಮಾರ್ಗಗಳನ್ನು ಮತ್ತು ನಿನ್ನ ಆಲೋಚನೆಗಳನ್ನು ಕಲಿಸು. ನಾನು ನಿನ್ನನ್ನು ಹಿಂಬಾಲಿಸುವಾಗ ನಿನ್ನ ಪವಿತ್ರಾತ್ಮನು ನನ್ನನ್ನು ಮಾರ್ಗದರ್ಶಿಸಲಿ.
S - ನಾನು ಈ ವಚನಗಳನ್ನು ಮತ್ತು ಈ ಅನ್ವಯವನ್ನು ನನ್ನ ಸ್ನೇಹಿತನಾದ ಸ್ಟೀವ್ ನೊಂದಿಗೆ ಹಂಚಿಕೊಳ್ಳುತ್ತೇನೆ, ಈತನು ಕಷ್ಟಕರವಾದ ಸಮಯವನ್ನು ಹಾದುಹೋಗುತ್ತಿದ್ದಾನೆ ಮತ್ತು ಅವನು ಎದುರಿಸುತ್ತಿರುವ ಮುಖ್ಯವಾದ ತೀರ್ಮಾನಗಳಿಗೆ ಮಾರ್ಗದರ್ಶನವು ಅಗತ್ಯವಾಗಿದೆ.
READ
(5 min)
ಹೊಣೆಗಾರಿಕೆಯ ಗುಂಪುಗಳು
ಯೇಸು ಹೇಳಿದ್ದಾರೆ -"ಯಾವನಿಗೆ ಬಹಳವಾಗಿ ಕೊಟ್ಟದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವದು;ಇದಲ್ಲದೆ ಯಾವನ ವಶಕ್ಕೆ ಹೆಚ್ಚು ಒಪ್ಪಿಸಿದೆಯೋ ಅವನ ಕಡೆಯಿಂದ ಇನ್ನೂ ಹೆಚ್ಚಾಗಿ ಕೇಳುವರು."
ಯೇಸು ಹೋಣೆಗಾರಿಕೆ ಕುರಿತು ಅನೇಕ ಕಥೆಗಳನ್ನು ಹೇಳಿದ್ದಾರೆ,ಮತ್ತು ನಾವು ಏನು ಮಾಡುತ್ತೇವೋ ಹಾಗು ಏನು ಹೇಳುತ್ತೇವೋ ಎಂಬುದಕ್ಕೆ ಹೇಗೆ ಹೋಣೆಗಾರರಾಗುತ್ತೇವೆ ಎಂಬುದರ ಕುರಿತು ಅನೇಕ ಸತ್ಯಗಳನ್ನು ಹೇಳಿದ್ದಾರೆ.
ಯೇಸು ಈಗ ಈ ವಿಷಯಗಳನ್ನು ನಮಗೆ ಹೇಳುತ್ತಾರೆ.ಆದ್ದರಿಂದ ನಾವು ನಂತರ ಸಿದ್ಧರಾಗಬಹುದು. ಯಾಕೆಂದರೆ ಒಂದು ದಿನ ನಾವು ಆತನಿಗೆ ಜವಾಬ್ದಾರರಾಗಿರುತ್ತೇವೆ ಹಾಗಾಗಿ ಈಗ ನಾವು ಒಬ್ಬರಿಗೊಬ್ಬರು ಜವಾಬ್ದಾರರಾಗಿರಲು ಅಭ್ಯಾಸ ಮಾಡುವುದು ಒಳ್ಳೆಯದು.
ಹೋಣೆಗಾರಿಕೆ ಗುಂಪುಗಳು ಒಂದೇ ಲಿಂಗದ ಎರಡು ಅಥವಾ ಮೂರು ಜನರಿಂದ ಮಾಡಲ್ಪಟ್ಟಿರುತ್ತವೆ. ಪುರುಷರೊಂದಿಗೆ ಪುರುಷರು ಮಹಿಳೆಯರೊಂದಿಗೆ ಮಹಿಳೆಯರು.ಸಂಗತಿಗಳು ಸರಿಯಾಗಿ ನಡೆಯುತ್ತಿರುವ ಅಥವಾ ತಿದ್ದುಪಡಿ ಅಗತ್ಯವಿರುವ ಇತರ ಕ್ಷೇತ್ರಗಳು ಬಹಿರಂಗಪಡಿಸಲು ಸಹಾಯ ಮಾಡುವ ಪ್ರಶ್ನೆಗಳನ್ನು ಚರ್ಚಿಸಲು ವಾರಕ್ಕೊಮ್ಮೆ ಗುಂಪಾಗಿ ಭೇಟಿಯಾಗುತ್ತಾರೆ.
ಯೇಸುವನ್ನು ಅನುಸರಿಸುವ ಪ್ರತಿಯೊಬ್ಬರು ಹೋಣೆಗಾರರಾಗಿದ್ದಾರೆ.ಆದ್ದರಿಂದ ಯೇಸುವನ್ನು ಅನುಸರಿಸುವ ಪ್ರತಿಯೊಬ್ಬರು ಹೋಣೆಗಾರಿಕೆಯನ್ನು ಇತರರೊಂದಿಗೆಅಭ್ಯಾಸ ಮಾಡಬೇಕು.
ಹೋಣೆಗಾರಿಕೆ ಗುಂಪುಗಳು- ಜೂಮೆ ಕೈಪಿಡಿಯನಲ್ಲಿ ಮತ್ತೊಂದು ಸರಳ ಸಾಧನವಾಗಿದೆ.
ಚಟುವಟಿಕೆ
(20 min)
ಒಪ್ಪಿಸಬೇಕಾದ ಗುಂಪುಗಳು
QR ಕೋಡ್ ಸ್ಕ್ಯಾನ್ ಮಾಡಿ.
ಒಂದೇ ಲಿಂಗದ ಇಬ್ಬರು ಅಥವಾ ಮೂವರು ಮಂದಿಯ ಗುಂಪುಗಳಾಗಿ ವಿಂಗಡಿಸಿ.
ಮುಂದಿನ 20 ನಿಮಿಷಗಳನ್ನು ಹೊಣೆಗಾರಿಕೆಯ ಪ್ರಶ್ನೆಗಳನ್ನು ಕುರಿತು ಒಟ್ಟಾಗಿ ಚರ್ಚಿಸಿರಿ.
- ದೇವರು ಮಾಡುತ್ತಿರುವ ಕಾರ್ಯವನ್ನು ನೀವು ಹೇಗೆ ನೋಡಿದ್ದೀರಿ?
- ನಿಮ್ಮ ಮಾತುಗಳು ಮತ್ತು ಕ್ರಿಯೆಗಳಿಂದ ಯೇಸು ಕ್ರಿಸ್ತನ ಶ್ರೇಷ್ಠತೆಯನ್ನು ಕುರಿತು ನೀವು ಈ ವಾರದಲ್ಲಿ ಸಾಕ್ಷಿಯಾಗಿದ್ದೀರಾ?
- ನೀವು ಲೈಂಗಿಕತೆಯನ್ನು ಪ್ರಚೋಧಿಸುವ ಪುಸ್ತಕಗಳಿಗೆ ತೆರೆದವರಾಗಿದ್ದೀರಾ ಅಥವಾ ಸೂಕ್ತವಲ್ಲದ ಲೈಂಗಿಕ ಆಲೋಚನೆಗಳಿಂದ ನಿಮ್ಮ ಮನಸ್ಸನ್ನು ನಡಿಸಿಕೊಂಡಿದ್ದೀರಾ?
- ನಿಮ್ಮ ಹಣವನ್ನು ಉಪಯೋಗಿಸಲು ನೀವು ದೇವರ ಒಡೆಯತ್ವವನ್ನು ಅರಿಕೆಮಾಡಿದ್ದೀರಾ?
- ನೀವು ಯಾವುದಕ್ಕಾದರೂ ದುರಾಶೆಪಟ್ಟಿದ್ದೀರಾ?
- ನಿಮ್ಮ ಮಾತುಗಳಿಂದ ನೀವು ಬೇರೊಬ್ಬರ ಹೆಸರು ಅಥವಾ ಭಾವನೆಗಳನ್ನು ನೋಯಿಸಿದ್ದೀರಾ?
- ನೀವು ಮಾತುಗಳಲ್ಲಿ ಅಥವಾ ಕ್ರಿಯೆಯಲ್ಲಿ ಅಪ್ರಾಮಾಣಿಕರಾಗಿದ್ದೀರಾ ಅಥವಾ ಅತಿಯಾಗಿ ಮಾಡಿದ್ದೀರಾ?
- ನೀವು ಚಟದ ನಡತೆಗೆ [ಅಥವಾ ಸೋಮಾರಿತನ ಅಥವಾ ಅಶಿಸ್ತಿಗೆ] ಒಪ್ಪಿಸಿದ್ದೀರಾ?
- ವಸ್ತ್ರಗಳನ್ನು ಧರಿಸಿಕೊಳ್ಳುವದು, ಸ್ನೇಹಿತರು, ಕೆಲಸ ಅಥವಾ ಸೊತ್ತುಗಳಿಗೆ ಗುಲಾಮರಾಗಿದ್ದೀರಾ?
- ಯಾರಿಗಾದರೂ ಕ್ಷಮಿಸಲು ವಿಫಲರಾಗಿದ್ದೀರಾ?
- ನೀವು ಎಂಥಾ ವಿಧವಾದ ಚಿಂತೆಗಳು ಅಥವಾ ಆತಂಕಗಳನ್ನು ಎದುರಿಸುತ್ತಿದ್ದೀರಿ?
- ನೀವು ದೂರು ಹೇಳಿದ್ದೀರಾ ಅಥವಾ ಗುಣುಗುಟ್ಟಿದ್ದೀರಾ?
- ನೀವು ಕೃತಜ್ಞತೆಯುಳ್ಳ ಹೃದಯವನ್ನು ಕಾಪಾಡಿಕೊಂಡಿದ್ದೀರಾ?
- ನಿಮ್ಮ ಪ್ರಾಮುಖ್ಯವಾದ ಸಂಬಂಧಗಳನ್ನು ನೀವು ಗೌರವಿಸುತ್ತಿದ್ದೀರಾ, ತಿಳಿದುಕೊಳ್ಳುತ್ತಿದ್ದೀರಾ ಮತ್ತು ಉದಾರತೆಯುಳ್ಳವರಾಗಿದ್ದೀರಾ?
- ನಿಮ್ಮ ಆಲೋಚನೆ ಮಾತು ಅಥವಾ ಕ್ರಿಯೆಯಲ್ಲಿ ಯಾವ ಶೋಧನೆಗಳನ್ನು ಎದುರಿಸಿದ್ದೀರಾ ಮತ್ತು ನೀವು ಹೇಗೆ ಪ್ರತಿಕ್ರಿಯಿಸಿದ್ದೀರಿ?
- ಇತರರಿಗೆ, ವಿಶೇಷವಾಗಿ ವಿಶ್ವಾಸಿಗಳಿಗೆ ಸೇವೆಮಾಡಲು ಅಥವಾ ಆಶೀರ್ವದಿಸಲು ನೀವು ಅವಕಾಶವನ್ನು ತೆಗೆದುಕೊಂಡಿದ್ದೀರಾ?
- ನೀವು ಪ್ರಾರ್ಥನೆಗೆ ನಿರ್ಧಿಷ್ಟವಾದ ಉತ್ತರಗಳನ್ನು ನೋಡಿದ್ದೀರಾ?
ಅವಲೋಕನ
(1 min)
ಈ ಅಧಿವೇಶನದಲ್ಲಿ ಕೇಳಿದ ಪರಿಕಲ್ಪನೆಗಳು:
ಈ ಅಧಿವೇಶನಲ್ಲಿ ಕುರಿತು ಕೇಳಿದ ಸಾಧನಗಳು:
- ದೇವರು ಸಾಮಾನ್ಯ ಜನರನ್ನು ಉಪಯೋಗಿಸುತ್ತಾನೆ
- ಶಿಷ್ಯ ಮತ್ತು ಸಭೆಯ ಸರಳ ವ್ಯಾಖ್ಯಾನ
- ಆತ್ಮೀಕ ಉಸಿರಾಟವು ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದಾಗಿದೆ
- ಎಸ್.ಓ.ಎ.ಪಿ.ಎಸ್ ಸತ್ಯವೇದ ಓದುವಿಕೆ
- ಲೆಕ್ಕ ಒಪ್ಪಿಸಬೇಕಾದ ಗುಂಪುಗಳು
NEXT STEP
ವಿಧೇಯರಾಗಿ
ಈಗ ಮತ್ತು ನಿಮ್ಮ ಮುಂದಿನ ಸಭೆಯ ನಡುವೆ ಎಸ್.ಓ.ಎ.ಪಿ.ಎಸ್. ಸತ್ಯವೇದ ಓದುವದನ್ನು ಅಭ್ಯಾಸ ಮಾಡಲು ಪ್ರಾರಂಭಿಸಿ. ಮತ್ತಾಯ 5-7ನ್ನು ಕೇಂದ್ರೀಕರಿಸಿ, ದಿನಕ್ಕೆ ಒಮ್ಮೆಯಾದರೂ ಅದನ್ನು ಓದಿ. ಎಸ್.ಓ.ಎ.ಪಿ.ಎಸ್. ಮಾದರಿ ಉಪಯೋಗಿಸಿಕೊಂಡು ದೈನಂದಿನ ದಿನಚರಿಯನ್ನು ಮಾಡಿ.
ಹಂಚಿಕೊಳ್ಳಿರಿ
ಲೆಕ್ಕ ಒಪ್ಪಿಸಬೇಕಾದ ಜೊತೆಗಾರರನ್ನು (ಒಂದೇ ಲಿಂಗದ) ಹುಡುಕಿ ಮತ್ತು ವಾರಕ್ಕೊಮ್ಮೆ ಅವರನ್ನು ಭೇಟಿಮಾಡಲು ಪ್ರಾರಂಭಿಸಿ.