ಜುಮೆ ಗೌಪ್ಯತಾ ನೀತಿ
ತಮ್ಮ "ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ" (ಪಿ.ಐ.ಐ) ಅನ್ನು ಆನ್‌ಲೈನ್‌ನಲ್ಲಿ ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಕುರಿತು ಕಾಳಜಿ ಹೊಂದಿರುವವರಿಗೆ ಉತ್ತಮ ಸೇವೆ ಮಾಡಲು ಈ ಗೌಪ್ಯತೆ ನೀತಿಯನ್ನು ಸಂಕಲಿಸಲಾಗಿದೆ. ಪಿ.ಐ.ಐ, ಯು.ಎಸ್. ಗೌಪ್ಯತೆ ಕಾನೂನು ಮತ್ತು ಮಾಹಿತಿ ಭದ್ರತೆಯಲ್ಲಿ ವಿವರಿಸಿದಂತೆ, ಒಬ್ಬ ವ್ಯಕ್ತಿಯನ್ನು ಗುರುತಿಸಲು, ಸಂಪರ್ಕಿಸಲು ಅಥವಾ ಪತ್ತೆಹಚ್ಚಲು ಅಥವಾ ಸಂದರ್ಭದಲ್ಲಿ ವ್ಯಕ್ತಿಯನ್ನು ಗುರುತಿಸಲು ಸ್ವಂತ ಅಥವಾ ಇತರ ಮಾಹಿತಿಯೊಂದಿಗೆ ಉಪಯೋಗಿಸಬಹುದಾದ ಮಾಹಿತಿಯಾಗಿದೆ. ನಮ್ಮ ವೆಬ್‌ಸೈಟ್‌ಗೆ ಅನುಗುಣವಾಗಿ ನಿಮ್ಮ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ನಾವು ಹೇಗೆ ಸಂಗ್ರಹಿಸುತ್ತೇವೆ, ಉಪಯೋಗಿಸುತ್ತೇವೆ, ರಕ್ಷಿಸುತ್ತೇವೆ ಅಥವಾ ನಿರ್ವಹಿಸುತ್ತೇವೆ ಎಂಬುದರ ಸ್ಪಷ್ಟ ತಿಳುವಳಿಕೆಯನ್ನು ಪಡೆಯಲು ದಯವಿಟ್ಟು ನಮ್ಮ ಗೌಪ್ಯತಾ ನೀತಿಯನ್ನು ಎಚ್ಚರಿಕೆಯಿಂದ ಓದಿ.
ಸಾಮಾಜಿಕ ಸೈನ್-ಆನ್ ಲಾಗಿನ್‌ಗಳು ಯಾವ ಅನುಮತಿಗಳನ್ನು ಕೇಳುತ್ತವೆ?
ಫೇಸ್‌ಬುಕ್ ಅಥವಾ ಗೂಗಲ್ ಸೈನ್ ಆನ್ ಉಪಯೋಗಿಸಿದರೆ ಕೆಳಗಿನ ಸಂಕ್ಷಿಪ್ತ ವ್ಯಕ್ತಿಚಿತ್ರದ ಅಂಶಗಳು ಬದಲಾಗುತ್ತವೆ.
- ಬಹಿರಂಗ ಸಂಕ್ಷಿಪ್ತ ವ್ಯಕ್ತಿಚಿತ್ರ. ಇದು ಐಡಿ, ಹೆಸರು, ಭಾವಚಿತ್ರ, ಲಿಂಗ ಮತ್ತು ಅವರ ಸ್ಥಳ ಇಂಥಾ ಕೆಲವು ಬಳಕೆದಾರರ ಮಾಹಿತಿಯನ್ನು ಒಳಗೊಂಡಿರುತ್ತದೆ.
- ಇಮೇಲ್ ವಿಳಾಸ.
ನಮ್ಮ ವೆಬ್‌ಸೈಟ್ ಮೂಲಕ ನಾವು ಜನರಿಂದ ಯಾವ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತೇವೆ?
ವೆಬ್‌ಸೈಟ್‌ನ ಸರಿಯಾದ ಕಾರ್ಯನಿರ್ವಹಣೆಗಾಗಿ ಕೆಲವು ವೈಯಕ್ತಿಕ ಮಾಹಿತಿಯ ಮೇಲೆ ಗಮನಹರಿಸಲಾಗುತ್ತದೆ ಮತ್ತು ಹೆಚ್ಚುವರಿ ತರಬೇತಿ ಮತ್ತು ಸಹಾಯಕ್ಕಾಗಿ ಇತರ ಮಾಹಿತಿಯನ್ನು ಮನವಿ ಮಾಡಲಾಗುತ್ತದೆ ಮತ್ತು ಉಳಿಸಲಾಗುತ್ತದೆ.
- ಸೈಟ್ ಮತ್ತು ಸಂಪರ್ಕದ ವೈಯಕ್ತಿಕ ಗುಣಮಟ್ಟವನ್ನು ಸುಧಾರಿಸಲು ಬಳಕೆದಾರರ ನಿಜವಾದ ಹೆಸರು ಅಥವಾ ಅಡ್ಡಹೆಸರನ್ನು, ಹಾಗೆಯೇ ಗ್ರಾಹಕ ಸೇವಾ ಮನವಿಗಳಿಗೆ ಮತ್ತು ತರಬೇತಿಗಾಗಿ ಮನವಿ ಮಾಡಲಾಗಿದೆ.
- ಸರಿಯಾದ ಸೈಟ್ ಮತ್ತು ಸಂಪರ್ಕ ಕಾರ್ಯನಿರ್ವಹಣೆಗೆ ಸಹಾಯಮಾಡಲು ಮತ್ತು ಬಳಕೆದಾರರನ್ನು ಸೂಕ್ತ ತರಬೇತಿ ಮತ್ತು ಸಂಪನ್ಮೂಲಗಳಿಂದ ಸಂಪರ್ಕಿಸಲು ನಮಗೆ ಸಹಾಯ ಮಾಡಲು ಬಳಕೆದಾರರ ಭಾಷಾ ಆದ್ಯತೆಯನ್ನು ಸಂಗ್ರಹಿಸಲಾಗುತ್ತದೆ.
- ಖಾತೆಯನ್ನು ಸ್ಥಾಪಿಸಲು ಬಳಕೆದಾರರ ಇಮೇಲ್ ವಿಳಾಸದ ಅಗತ್ಯವಿರುತ್ತದೆ ಮತ್ತು ಸೈಟ್ ಕಾರ್ಯಾಚರಣೆಯ ಭಾಗವಾಗಿ ವಹಿವಾಟಿನ ಸಂಪರ್ಕಕ್ಕಾಗಿ ಉಪಯೋಗಿಸಲಾಗುತ್ತದೆ.
- ಉಚಿತ ತರಬೇತಿ ಸೇವೆಯನ್ನು ಬೆಂಬಲಿಸಲು ಬಳಕೆದಾರರ ಫೋನ್ ಸಂಖ್ಯೆಯನ್ನು ಸಂಗ್ರಹಿಸಿ ಶೇಖರಿಸಲಾಗುತ್ತದೆ.
- ಸೈಟ್ ಸಂಪನ್ಮೂಲಗಳು ಮತ್ತು ಸಂಪರ್ಕವನ್ನು ವೈಯಕ್ತೀಕರಿಸಲು ಮತ್ತು ಬಳಕೆದಾರರನ್ನು ಸೂಕ್ತ ತರಬೇತಿ ಮತ್ತು ಗ್ರಾಹಕ ಸೇವಾ ಸಂಪನ್ಮೂಲಗಳನ್ನು ಸಂಪರ್ಕಿಸಲು ಬಳಕೆದಾರರ ನಗರವನ್ನು ಮಿನವಿ ಮಾಡಲಾಗಿದೆ.
ನಾವು ಯಾವಾಗ ಮಾಹಿತಿಯನ್ನು ಸಂಗ್ರಹಿಸುತ್ತೇವೆ?
- ನಾವು ಲಾಗಿನ್ ನಲ್ಲಿ ನಿಮ್ಮ ಮಾಹಿತಿಯನ್ನು ಸಂಗ್ರಹಿಸುತ್ತೇವೆ.
- ತರಬೇತಿಯ ಕೋರ್ಸ್ ಮೂಲಕ ಮತ್ತು ಸೈಟ್ ಉಪಯೋಗದ ಮೂಲಕ ನಿಮ್ಮ ಪ್ರಗತಿಯನ್ನು ನಾವು ಗಮನಿಸುತ್ತೇವೆ.
- ನಾವು ವಿವಿಧ ಸೈನ್ ಅಪ್ ಮತ್ತು ಮನವಿ ನಮೂನೆಗಳ ಮೂಲಕ ಅಗತ್ಯ ಮಾಹಿತಿಯನ್ನು ಕೋರುತ್ತೇವೆ.
ನಿಮ್ಮ ಮಾಹಿತಿಯನ್ನು ನಾವು ಹೇಗೆ ಉಪಯೋಗಿಸುತ್ತೇವೆ?
- ನಿಮ್ಮ ಇಮೇಲ್ ವಿಳಾಸವನ್ನು ಆಧರಿಸಿ ಜುಮೆ ವ್ಯವಸ್ಥೆಯಲ್ಲಿ ಬಳಕೆದಾರರ ಖಾತೆಯನ್ನು ಮಾಡಲು ನಿಮ್ಮ ಮಾಹಿತಿಯನ್ನು ನಾವು ಉಪಯೋಗಿಸುತ್ತೇವೆ.
- ಪಾಸ್‌ವರ್ಡ್ ಮರುಹೊಂದಿಸುವ ಮನವಿಗಳು ಮತ್ತು ಇತರ ಅಧಿಸೂಚನೆಗಳಂತಹ ಮೂಲಭೂತ ವಹಿವಾಟಿನ ಇಮೇಲ್‌ಗಳಿಂದ ನಾವು ನಿಮಗೆ ಇಮೇಲ್ ಮಾಡುತ್ತೇವೆ.
- ತರಬೇತಿಯ ಮೂಲಕ ನಿಮ್ಮ ಪ್ರಗತಿಯನ್ನು ಅವಲಂಬಿಸಿ ನಾವು ಸಾಂದರ್ಭಿಕ ಜ್ಞಾಪನೆಗಳು ಮತ್ತು ಪ್ರೋತ್ಸಾಹಗಳನ್ನು ಇಮೇಲ್ ಮಾಡುತ್ತೇವೆ.
ನಿಮ್ಮ ಮಾಹಿತಿಯನ್ನು ನಾವು ಹೇಗೆ ಕಾಪಾಡುತ್ತೇವೆ?
ಆನ್‌ಲೈನ್‌ನಲ್ಲಿ ರವಾನೆಯಾಗುವ ಸೂಕ್ಷ್ಮ ಮಾಹಿತಿಯನ್ನು ರಕ್ಷಿಸಲು ನಾವು ಎನ್‌ಕ್ರಿಪ್ಶನ್ ಉಪಯೋಗಿಸುವಾಗ, ನಿಮ್ಮ ಮಾಹಿತಿಯನ್ನು ಆಫ್‌ಲೈನ್‌ನಲ್ಲಿಯೂ ನಾವು ಕಾಪಾಡುತ್ತೇವೆ. ನಿರ್ದಿಷ್ಟ ಕೆಲಸವನ್ನು ನಿರ್ವಹಿಸಲು ಮಾಹಿತಿಯ ಅಗತ್ಯವಿರುವ ತಂಡದ ಸದಸ್ಯರಿಗೆ ಮಾತ್ರ (ಉದಾಹರಣೆಗೆ, ವೆಬ್ ನಿರ್ವಾಹಕರು ಅಥವಾ ಗ್ರಾಹಕ ಸೇವೆ) ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಗೆ ಪ್ರವೇಶವನ್ನು ಕೊಡಲಾಗುತ್ತದೆ.
ನಿಮ್ಮ ವೈಯಕ್ತಿಕ ಮಾಹಿತಿಯು ಸುರಕ್ಷಿತ ನೆಟ್‌ವರ್ಕ್‌ಗಳ ಹಿಂದೆ ಇದೆ ಮತ್ತು ಅಂತಹ ವ್ಯವಸ್ಥೆಗಳಿಗೆ ವಿಶೇಷ ಪ್ರವೇಶ ಹಕ್ಕುಗಳನ್ನು ಹೊಂದಿರುವ ಸೀಮಿತ ಸಂಖ್ಯೆಯ ವ್ಯಕ್ತಿಗಳಿಂದ ಮಾತ್ರ ಪ್ರವೇಶಿಸಬಹುದಾಗಿದೆ ಮತ್ತು ಮಾಹಿತಿಯನ್ನು ಗೌಪ್ಯವಾಗಿಡಲು ಅಗತ್ಯವಾಗಿರುತ್ತದೆ. ಹೆಚ್ಚುವರಿಯಾಗಿ, ನೀವು ಪೂರೈಸುವ ಎಲ್ಲಾ ಸೂಕ್ಷ್ಮ / ಕ್ರೆಡಿಟ್ ಮಾಹಿತಿಯನ್ನು ಸುರಕ್ಷಿತ ಸಾಕೆಟ್ ಲೇಯರ್ (ಎಸ್‌ಎಸ್‌ಎಲ್) ತಂತ್ರಜ್ಞಾನದ ಮೂಲಕ ಎನ್‌ಕ್ರಿಪ್ಟ್ ಮಾಡಲಾಗುತ್ತದೆ.
ಬಳಕೆದಾರರು ಸಲ್ಲಿಸಿದಾಗ ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಅವರ ಮಾಹಿತಿಯನ್ನು ಪ್ರವೇಶಿಸಿದಾಗ ನಾವು ವಿವಿಧ ಭದ್ರತಾ ಕ್ರಮಗಳನ್ನು ಜಾರಿಗೊಳಿಸುತ್ತೇವೆ.
ನಾವು "ಕುಕೀಗಳನ್ನು" ಬಳಸುತ್ತೇವೆಯೇ?
ಕುಕೀಗಳ ಯಾವುದೇ ಬಳಕೆ - ಅಥವಾ ಇತರ ಟ್ರ್ಯಾಕಿಂಗ್ ಸಾಧನಗಳು - ಈ ಅಪ್ಲಿಕೇಶನ್ ಮೂಲಕ ಅಥವಾ ಈ ಅಪ್ಲಿಕೇಶನ್ ಉಪಯೋಗಿಸುವ ಮೂರನೇ ವ್ಯಕ್ತಿಯ ಸೇವೆಗಳ ಮಾಲೀಕರು, ಬೇರೆ ರೀತಿಯಲ್ಲಿ ಹೇಳದ ಹೊರತು, ಅಗತ್ಯವಿರುವ ಸೇವೆಯನ್ನು ಒದಗಿಸುವ ಏಕೈಕ ಉದ್ದೇಶಕ್ಕಾಗಿ ಬಳಕೆದಾರರನ್ನು ಗುರುತಿಸಲು ಮತ್ತು ಅವರ ಆದ್ಯತೆಗಳನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಮಾಹಿತಿಗೆ ನಿಮ್ಮ ಪ್ರವೇಶ ಮತ್ತು ನಿಯಂತ್ರಣ.
ನಮ್ಮ "ನಮ್ಮನ್ನು ಸಂಪರ್ಕಿಸಿ" ಪುಟದ ಮೂಲಕ ನಮ್ಮನ್ನು ಸಂಪರ್ಕಿಸಿದರೆ, ನೀವು ಯಾವುದೇ ಸಮಯದಲ್ಲಿ ಕೆಳಗಿನ ಕಾರ್ಯಗಳನ್ನು ಮಾಡಬಹುದು.
- ನಮ್ಮೊಂದಿಗೆ ನಿಮ್ಮ ಚಟುವಟಿಕೆಗಳಿಂದ ನಾವು ಯಾವ ಮಾಹಿತಿಯನ್ನು ಒಟ್ಟುಗೂಡಿಸಿದ್ದೇವೆ ಎಂಬುದನ್ನು ನೋಡಿ.
- ನಿಮ್ಮ ಬಗ್ಗೆ ನಾವು ಹೊಂದಿರುವ ಯಾವುದೇ ಮಾಹಿತಿಯನ್ನು ಬದಲಾಯಿಸಿ/ಸರಿಪಡಿಸಿ.
- ನಿಮ್ಮ ಬಗ್ಗೆ ನಾವು ಹೊಂದಿರುವ ಯಾವುದೇ ಮಾಹಿತಿಯನ್ನು ಅಳಿಸಿ.
- ನಿಮ್ಮ ಮಾಹಿತಿಯನ್ನು ನಾವು ಉಪಯೋಗಿಸುವುದರ ಬಗ್ಗೆ ನೀವು ಹೊಂದಿರುವ ಯಾವುದೇ ಕಾಳಜಿಯನ್ನು ವ್ಯಕ್ತಪಡಿಸಿ.
- ನಮ್ಮಿಂದ ಯಾವುದೇ ಭವಿಷ್ಯದ ಸಂಪರ್ಕದಿಂದ ಹೊರಗುಳಿಯಿರಿ.
ನವೀಕರಣಗಳು
ನಮ್ಮ ಗೌಪ್ಯತಾ ನೀತಿಯು ಕಾಲಕಾಲಕ್ಕೆ ಬದಲಾಗಬಹುದು ಮತ್ತು ಎಲ್ಲಾ ನವೀಕರಣಗಳನ್ನು ಈ ಪುಟದಲ್ಲಿ ಪ್ರಕಟಿಸಲಾಗುತ್ತದೆ.