ಜುಮೆ ತರಬೇತಿಯಿಂದ ಪ್ರಾರಂಭಿಸಿ

ನಿಮ್ಮ ಸ್ವಂತ ತರಬೇತಿಯನ್ನು ರಚಿಸಿ

ಒಂದು ಗುಂಪನ್ನು ರಚಿಸಿ

ಕೆಲವು ಸ್ನೇಹಿತರನ್ನು ಒಟ್ಟುಗೂಡಿಸಿ ಅಥವಾ ಅಸ್ತಿತ್ವದಲ್ಲಿರುವ ಚಿಕ್ಕ ಗುಂಪಿನೊಂದಿಗೆ ಕೋರ್ಸ್ ಮಾಡಿರಿ. ನಿಮ್ಮ ಸ್ವಂತ ತರಬೇತಿ ಗುಂಪನ್ನು ರಚಿಸಿ ಮತ್ತು ನಿಮ್ಮ ಪ್ರಗತಿಯನ್ನು ಗಮನಿಸಿ.

ರಚಿಸಿ

ತರಬೇತಿಗೆ ಸೇರಿಕೊಳ್ಳಿ

ಒಂದು ಗುಂಪನ್ನು ಸೇರಿ

ನೀವು ಈಗ ಗುಂಪನ್ನು ಒಟ್ಟುಗೂಡಿಸಲು ಸಾಧ್ಯವಾಗದಿದ್ದರೆ, ಅನುಭವಿ ಜುಮೆ ತರಬೇತುದಾರರ ನೇತೃತ್ವದಲ್ಲಿ ನಮ್ಮ ಆನ್‌ಲೈನ್ ತರಬೇತಿಗಳಲ್ಲಿ ಒಂದನ್ನು ಸೇರಲು ಪರಿಗಣಿಸಿ.

ಸೇರಿಕೊಳ್ಳಿ

ತರಬೇತುದಾರರಿಗಾಗಿ ಮನವಿ ಮಾಡಿ

ತರಬೇತುದಾರರಿಗಾಗಿ ಮನವಿ ಮಾಡಿ

ನಾವು ನಿಮ್ಮನ್ನು ಉಚಿತ ಜುಮೆ ತರಬೇತುದಾರರೊಂದಿಗೆ ಸಂಪರ್ಕ ಕಲ್ಪಿಸುತ್ತೇವೆ, ಅವರು ನಿಮಗೆ ತರಬೇತಿಯನ್ನು ಪಡೆಯಲು ಮತ್ತು ಫಲಕೊಡುವ ಶಿಷ್ಯರಾಗಲು ಸಹಾಯ ಮಾಡುವುದಕ್ಕಾಗಿ ಸಮರ್ಪಿತರಾಗಿದ್ದಾರೆ.

ಸಹಾಯ ಪಡೆಯಿರಿ

ಕೋರ್ಸ್ ಪರಿಕಲ್ಪನೆಗಳು

ಈ ಸ್ವಯಂ-ಸುಮಗೊಳಿಸಲ್ಪಟ್ಟ ಕೋರ್ಸ್‌ನಲ್ಲಿ, ಈ ಕೆಳಗಿನ ಕ್ಷೇತ್ರಗಳಲ್ಲಿ ನಿಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಅಭಿವೃದ್ಧಿಪಡಿಸಲು ನೀವು ಮತ್ತು ನಿಮ್ಮ ತರಬೇತಿ ಗುಂಪು ಕಿರು ವೀಡಿಯೊಗಳು, ಚರ್ಚೆಯ ಪ್ರಶ್ನೆಗಳು ಮತ್ತು ಸರಳ ಚಟುವಟಿಕೆಗಳನ್ನು ಉಪಯೋಗಿಸುತ್ತೀರಿ:

ಶಿಷ್ಯತ್ವದ ಪರಿಕಲ್ಪನೆಗಳು

  • ದೇವರು ಸಾಮಾನ್ಯ ಜನರನ್ನು ಉಪಯೋಗಿಸುತ್ತಾನೆ
  • ಶಿಷ್ಯನು ಮತ್ತು ಸಭೆಯ ಸರಳ ನಿರೂಪಣೆ
  • ಆತ್ಮೀಕ ಉಸಿರಾಟ ಎಂದರೆ ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದು
  • ಗ್ರಾಹಕ ಮತ್ತು ಉತ್ಪಾದಕರ ಜೀವನಶೈಲಿ
  • ಆತ್ಮೀಕ ಆರ್ಥಿಕತೆ
  • ಮರಿಬಾತುಕೋಳಿ ಶಿಷ್ಯತ್ವ - ತಕ್ಷಣವೇ ನಡೆಸುವುದು
  • ದೇವರರಾಜ್ಯ ಎಲ್ಲಿ ಇಲ್ಲ ಎಂದು ನೋಡಲು ಕಣ್ಣುಗಳು
  • ಒಬ್ಬ ಸಮಾಧಾನದ ವ್ಯಕ್ತಿ ಮತ್ತು ಅವರನ್ನು ಕಂಡುಕೊಳ್ಳುವುದು ಹೇಗೆ
  • ನಂಬಿಗಸ್ತಿಕೆಯು ತಿಳುವಳಿಕೆಗಿಂತ ಉತ್ತಮ
  • ನಾಯಕತ್ವದ ಚಿಕ್ಕಗುಂಪುಗಳು
  • ಅನುಕ್ರಮವಲ್ಲದ ಬೆಳವಣಿಗೆಯನ್ನು ನಿರೀಕ್ಷಿಸಿ
  • ಹೆಚ್ಚಿಸುವ ವೇಗವು ಪ್ರಾಮುಖ್ಯವಾಗಿದೆ
  • ಯಾವಾಗಲೂ ಎರಡು ಸಭೆಗಳ ಭಾಗವಾಗಿದೆ
  • ಜಾಲಬಂಧದಲ್ಲಿ ನಾಯಕತ್ವ
  • ಆಪ್ತ ಸಲಹೆಗಾರರ ಗುಂಪುಗಳು

ಆತ್ಮೀಕ ಅಭ್ಯಾಸಗಳು

  • ಎಸ್.ಓ.ಎ.ಪಿ.ಎಸ್ ಸತ್ಯವೇದ ಅಧ್ಯಯನ
  • ಹೊಣೆಗಾರಿಕೆಯ ಗುಂಪುಗಳು
  • ಪ್ರಾರ್ಥನೆಯಲ್ಲಿ ಒಂದು ಗಂಟೆ ಕಳೆಯುವುದು ಹೇಗೆ
  • ಸಂಬಂಧಿತ ಉಸ್ತುವಾರಿ - 100 ಮಂದಿಯ ಪಟ್ಟಿ
  • ಸುವಾರ್ತೆ ಮತ್ತು ಅದನ್ನು ಹಂಚಿಕೊಳ್ಳುವುದು ಹೇಗೆ
  • ದೀಕ್ಷಾಸ್ನಾನ ಮತ್ತು ಅದನ್ನು ನಡೆಸುವುದು ಹೇಗೆ
  • ನಿಮ್ಮ 3-ನಿಮಿಷದ ಸಾಕ್ಷಿಯನ್ನು ಸಿದ್ಧಪಡಿಸಿ
  • ದರ್ಶನವನ್ನು ತಿಳಿಸುವುದು ಅತಿಶ್ರೇಷ್ಠವಾದ ಆಶೀರ್ವಾದವಾಗಿದೆ
  • ಕರ್ತನ ಭೋಜನ ಮತ್ತು ಅದನ್ನು ನಡೆಸುವುದು ಹೇಗೆ
  • ಪ್ರಾರ್ಥನಾ ನಡಿಗೆ ಮತ್ತು ಅದನ್ನು ನಡೆಸುವುದು ಹೇಗೆ
  • ಬಿ.ಎಲ್.ಇ.ಇ.ಎಸ್ ಪ್ರಾರ್ಥನೆ ಮಾದರಿ
  • 3/3 ಗುಂಪಿನ ಕೂಟದ ಮಾದರಿ
  • ಪರಿಪಕ್ವವಾಗುತ್ತಿರುವ ಶಿಷ್ಯರಿಗೆ ತರಬೇತಿ ಕಾಲಚಕ್ರ
  • ಮೂರು-ತಿಂಗಳ ಯೋಜನೆ
  • ತರಬೇತಿಯ ಪರಿಶೀಲನಾಪಟ್ಟಿ
  • ನಾಲ್ಕು ಕ್ಷೇತ್ರಗಳ ಸಾಧನ
  • ವಂಶಾವಳಿಯ ನಕ್ಷೆ
  • 3-ವೃತ್ತಗಳ ಸುವಾರ್ತೆಯ ಪ್ರಸ್ತುತಿ

ತರಬೇತಿ ವೇಳಾಪಟ್ಟಿಗಳು

ಜುಮೆ 20 ಗಂಟೆಗಳ ತರಬೇತಿಯಾಗಿದೆ. ಆದರೆ ನಿಮ್ಮ ತರಬೇತಿ ಗುಂಪಿನ ಲಭ್ಯತೆಯನ್ನು ಅವಲಂಬಿಸಿ ಆ 20 ಗಂಟೆಗಳನ್ನು ವಿಭಿನ್ನವಾಗಿ ವಿಂಗಡಿಸಬಹುದು.

10 ಅಧಿವೇಶನಗಳು

ಮೂಲ ಜುಮೆ ಕೋರ್ಸ್ ಮಾದರಿಯು 10, ಎರಡು ಗಂಟೆಗಳ ಅವಧಿಯಾಗಿದೆ. ಪ್ರತಿ ಅಧಿವೇಶನವು ಪ್ರಾಯೋಗಿಕ ವಿಧೇಯತೆಯ ಹಂತಗಳು ಮತ್ತು ಅಧಿವೇಶನಗಳ ನಡುವೆ ಹಂಚಿಕೊಳ್ಳುವ ವಿಧಾನಗಳಿಂದ ಮುಕ್ತಾಯಗೊಳ್ಳುತ್ತದೆ. ಈ ಮಾದರಿಯನ್ನು ಸಾಮಾನ್ಯವಾಗಿ 10 ವಾರಗಳವರೆಗೆ ವಾರಕ್ಕೊಮ್ಮೆ ನಡೆಸಲಾಗುತ್ತದೆ.

20 ಅಧಿವೇಶನಗಳು

ಪರಿಕಲ್ಪನೆಗಳು ಮತ್ತು ಕೌಶಲ್ಯಗಳಲ್ಲಿ ಸಾಮರ್ಥ್ಯವನ್ನು ಗಳಿಸಲು ಹೆಚ್ಚಿನ ಅವಕಾಶದೊಂದಿಗೆ ದೀರ್ಘವಾದ ನಿಧಾನಗತಿಯ ಕೋರ್ಸ್‌ಗಾಗಿ, 20 ಅಧಿವೇಶನದ ಮಾದರಿಯು ಪ್ರತಿಯೊಂದು ಪರಿಕಲ್ಪನೆಗಳು ಮತ್ತು ಸಾಧನಗಳಿಗೆ ಹೆಚ್ಚಿನ ಅಭ್ಯಾಸದ ಅವಕಾಶಗಳನ್ನು ಹೊಂದಿದೆ.

ತೀವ್ರತೆ

ಜುಮ್ ಪ್ರತಿ 4 ಗಂಟೆಗಳ 5 ಅರ್ಧ ದಿನದ ವಿಭಾಗಗಳಾಗಿ ಸಂಕುಚಿತಗೊಳಿಸಬಹುದು. ಇದನ್ನು ಶುಕ್ರವಾರ ಸಂಜೆ (4 ಗಂಟೆಗಳು), ಮತ್ತು ಎಲ್ಲಾ ದಿನ ಶನಿವಾರ (8 ಗಂಟೆಗಳು) ಮತ್ತು ಇಡೀ ದಿನ ಭಾನುವಾರ (8 ಗಂಟೆಗಳು) ಮಾಡಬಹುದು.

ಯಾವ ಅಗತ್ಯವಿದೆ?

ಕೋರ್ಸ್‌ಗೆ ಇರುವ ಅಗತ್ಯತೆಗಳು:

  • ಸಭೆಯ ಸಮಯ ಮತ್ತು ಸ್ಥಳವನ್ನು ಸುಗಮಗೊಳಿಸಲು (ಸಂಭಾವ್ಯವಾಗಿ ನೀವು) ಒಬ್ಬ ವ್ಯಕ್ತಿ, ಅನುಸರಣಾ ಚರ್ಚೆಗೆ ಮಾರ್ಗದರ್ಶನ ಕೊಡಲು ಮತ್ತು ಕ್ರಿಯೆಗಳನ್ನು ಸುಲಭಗೊಳಿಸುವುದು.
  • ಕೋರ್ಸ್‌ನಲ್ಲಿನ ಪರಿಕಲ್ಪನೆಗಳು ಮತ್ತು ಸಾಧನಗಳನ್ನು ಕಲಿಯಲು ಮತ್ತು ಅಭ್ಯಾಸ ಮಾಡಲು 20 ಗಂಟೆಗಳ ಕಾಲ ಕಳೆಯಲು ಸಮರ್ಪಣೆ.
  • ಕನಿಷ್ಠ 3 ಜನರು, ಆದರೆ ಸಾಮಾನ್ಯವಾಗಿ 12 ಕ್ಕಿಂತ ಕಡಿಮೆ.

ಕೋರ್ಸ್‌ಗಾಗಿ ಅಗತ್ಯವಿಲ್ಲದವುಗಳು:

  • ×ಕೋರ್ಸ್ ನಡೆಸಲು ವಿಶೇಷ ಅನುಮತಿಯ ಅಗತ್ಯವಿಲ್ಲ! ಜುಮೆ ಸ್ವಯಂ-ಸುಗಮಗೊಳಿಸುವ, ಸ್ವಯಂ-ಪ್ರಾರಂಭಿಸುವ, ಮತ್ತು ನೀವು ಇಂದೇ ಪ್ರಾರಂಭಿಸಬಹುದು.
  • ×ನಿಮ್ಮ ಗುಂಪಿನ ಉಳಿದವರಿಗಿಂತ ಹೆಚ್ಚಿನ ಜ್ಞಾನ ಅಥವಾ ಅನುಭವದ ಅಗತ್ಯವಿಲ್ಲ! ನೀವು ‘ಮುಂದಿನ’ ಎಂಬುದು ಕ್ಲಿಕ್ ಮಾಡಿದರೆ, ನೀವು ಜುಮೆ ತರಬೇತಿಯನ್ನು ನಡೆಸಬಹುದು.